ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ 2016-17

ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ 2016-17

ದಿ.೧೧-೧೧-೨೦೧೬ರಂದು ಅಳಿಕೆ ಶ್ರೀ ಸತ್ಯಸಾಯಿ ಕ್ರೀಡಾಂಗಣದಲ್ಲಿ ಜರಗಿದ ಬಂಟ್ವಾಳ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗುರುನಾಥ ಬಿ. ಬಾಗೇವಾಡಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ, ಬಂಟ್ವಾಳ ತಾಲೂಕು ಇವರು ವಹಿಸಿ ಬಹುಮಾನವನ್ನು ವಿತರಿಸಿದರು. ವೇದಿಕೆಯಲ್ಲಿ ಚಂದ್ರಶೇಖರ ಭಟ್ ಎಸ್. ಕಾರ್ಯದರ್ಶಿ, ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ, ರಘು ಟಿ.ವೈ., ಪ್ರೌಢಶಾಲಾ, ಮುಖ್ಯೋಪಾಧ್ಯಾಯರು, ಈಶ್ವರ ನಾಯ್ಕ್, ಮುಖ್ಯೋಪಾಧ್ಯಾಯರು, ಪ್ರಾಥಮಿಕ ಶಾಲೆ, ಅಳಿಕೆ, ಪೂವಪ್ಪ ಶೆಟ್ಟಿ, ಅಳಿಕೆ ಉಪಸ್ಥಿತರಿದ್ದರು. ಅಶೋಕ ಭಟ್ […]

ಗಾಂಧಿ ಜಯಂತಿ ಆಚರಣೆ

ಗಾಂಧಿ ಜಯಂತಿ ಆಚರಣೆ

ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯಲ್ಲಿ ಅಕ್ಟೋಬರ್ 2 ರಂದು ಗಾಂಧೀಜಿ ಹಾಗು ಶಾಸ್ತ್ರೀಜೀ ಅವರ ಜನ್ಮ ದಿನವನ್ನು ಆಚರಿಸಲಾಯಿತು. ಇವರ ಭಾವಚಿತ್ರಕ್ಕೆ ಶಿಕ್ಷಕರುಗಳಿಂದ ಪುಷ್ಪ ನಮನ ಸಲ್ಲಿಸಲಾಯಿತು. ವಿದ್ಯಾರ್ಥಿಗಳಿಬ್ಬರು ಈ ದಿನದ ಮಹತ್ವದ ಕುರಿತು ಮಾತನಾಡಿದರು ಶಿಕ್ಷಕ ಅಶೋಕ ಕುಮಾರ್ ಮಾತನಾಡಿ ಗಾಂಧೀಜಿಯವರ ಸರಳತೆ ತತ್ವವನ್ನು ಜೀವನದಲ್ಲಿ ಅಳವಡಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ನಂತರ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲಾ ಸಮೀಪದ ರಸ್ತೆ, ಅಂಗಡಿ ಮಂಭಾಗ, ಶಾಲಾ ವಠಾರದಲ್ಲಿ ಕಸ ಹೆಕ್ಕುದರ ಮೂಲಕ ಸ್ವಚ್ಛತಾ ಆಂದೋಲನವನ್ನು ನಡೆಸಿದರು. […]

ಗಣೇಶೋತ್ಸವದ ಮೂರನೇ ದಿನದ ಕಾರ್ಯಕ್ರಮ

ಗಣೇಶೋತ್ಸವದ ಮೂರನೇ ದಿನದ ಕಾರ್ಯಕ್ರಮ

ದಿನಾಂಕ : 07-09-2016 ಬುಧವಾರ ಸಮಯ : ಪೂರ್ವಾಹ್ನ 10:00 ರಿಂದ ಸೇವೆ ತ್ಯಾಗಗಳಿಂದ ಜೀವನ ಸಾರ್ಥಕ್ಯ – ವಿನಯ ಬಿದರಿ ಮೌಲ್ಯಯುತ ಶಿಕ್ಷಣದ ಕೊರತೆ ಇಂದಿನ ಮುಖ್ಯ ಸಮಸ್ಯೆಯಾಗಿದೆ. ಅಳಿಕೆಯಂತಹ ಶಿಕ್ಷಣ ಸಂಸ್ಥೆಗಳು ನಮಗಿಂದು ಬೇಕಾಗಿದೆ. ವಿದೇಶ ವ್ಯಾಮೋಹವನ್ನು ಬಿಟ್ಟು ದೇಶದ ಬಗ್ಗೆ ಚಿಂತನೆ ನಡೆಸಿ. ನೀವೂ ಬಾಳಿ ಉಳಿದವರನ್ನು ಬದುಕಲು ಬಿಡಿ. ಕಷ್ಟದಲ್ಲಿದ್ದವರನ್ನು ಕಂಡಾಗ ಕರಗುವ ಮನಸ್ಸಿರಲಿ. ಸೇವೆ ತ್ಯಾಗದ ಮೂಲಕ ಅವರ ಬಾಳಿನಲ್ಲೂ ಬೆಳಕು ಕಾಣುವಂತೆ ಮಾಡಿ. ನಾವು ಭಾರತೀಯರು ಎಂದು ಹೆಮ್ಮೆಯಿಂದ […]

ಗಣೇಶೋತ್ಸವ ಕಾರ್ಯಕ್ರಮ

ಗಣೇಶೋತ್ಸವ ಕಾರ್ಯಕ್ರಮ

ದಿನಾಂಕ : 06-09-2016 ಮಂಗಳವಾರ ಸಮಯ : ಅಪರಾಹ್ನ 3:೦೦ರಿಂದ ಮಾತಾಪಿತರನ್ನು ಗೌರವಿಸಿ – ಸೀತಾರಾಮ ಕೇವಳ ವಿಶ್ವ ವಿರಾಟ್ ರೂಪದ ಸಾಂಕೇತಿಕ ಸ್ವರೂಪವೇ ಶ್ರೀ ವಿನಾಯಕನ ಆಕಾರ. ಮಾತಾ ಪಿತರನ್ನು ವಿಶ್ವದ ಸಮಸ್ತ ವಸ್ತುಗಳಿಗಿಂತ ಮಿಗಿಲಾಗಿ ಗೌರವಿಸಿ. ಇದು ಅವನ ಸಂದೇಶ. ಹಿರಿಯ ತಲೆಮಾರಿನ ಸೇವೆ ತ್ಯಾಗವನ್ನು ನೆನಪಿಸಲು ಚೌತಿಯ ಆಚರಣೆ. ಸಮಾಜ ಮುಖಿ ಪ್ರವೃತ್ತಿಯಿಂದ ಪ್ರಸನ್ನತೆ ಲಭಿಸುತ್ತದೆ ಎಂದು ರಾಷ್ಟ್ರಮಟ್ಟದ ಜೇಸೀ ತರಬೇತುದಾರ ಸೀತಾರಾಮ ಕೇವಳ, ಸವಣೂರು ಇವರು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ […]

ಶ್ರೀ ವಿದ್ಯಾಗಣಪತಿ ಮಹೋತ್ಸವ

ಶ್ರೀ ವಿದ್ಯಾಗಣಪತಿ ಮಹೋತ್ಸವ

ದಿನಾಂಕ : 05-09-2016 ಬುಧವಾರ ಸಮಯ : ಅಪರಾಹ್ನ 3:00 ರಿಂದ ಪ್ರಯತ್ನವೇ ಸಿದ್ಧಿಯ ದಾರಿ ಡಾ| ಶ್ರೀನಿವಾಸ ಶೆಟ್ಟಿ ಯಸ್., ಸಾಹಿತಿಗಳು, ಮಂಡ್ಯ ಸಂದರ್ಭಗಳನ್ನು ಅನುಕೂಲಕರವಾಗಿ ತಿರುಗಿಸುವುದರಲ್ಲೇ ಜಾಣ್ಮೆ ಇದೆ. ಗಣೇಶ ನಮಗೆ ಇದನ್ನು ತಿಳಿಸುತ್ತಾನೆ. ದರ್ಶನ ಸಾಹಿತ್ಯ ವಿಶ್ವಕ್ಕೆ ಭಾರತದ ಕೊಡುಗೆ. ಮಗುವುತನವನ್ನು ಬೆಳೆಸಿಕೊಳ್ಳಿ. ಪ್ರಯತ್ನಶೀಲರಾಗಿ. ಪ್ರಯತ್ನದಲ್ಲಿ ಸೋಲಾಗಬಹುದು. ಪ್ರಯತ್ನಕ್ಕೆ ಸೋಲಾಗಬಾರದು. ಗುರಿ ಇಲ್ಲವಾದರೆ ದಾರಿ ಸಿಗದು. ದಿನ ದಿನವೂ ಹೊಸತನವನ್ನು ಬೆಳೆಸಿಕೊಳ್ಳಿ ಎಂದು ಮಂಡ್ಯದ ಸಾಹಿತಿ ಡಾ| ಶ್ರೀನಿವಾಸ ಶೆಟ್ಟಿಯವರು ನುಡಿದರು. ಅವರು […]

ಅಳಿಕೆಯ ಸತ್ಯಸಾಯಿ ವಿಹಾರದಲ್ಲಿ ಗುಡ್ಡಗಾಡು ಓಟ

ಅಳಿಕೆಯ ಸತ್ಯಸಾಯಿ ವಿಹಾರದಲ್ಲಿ ಗುಡ್ಡಗಾಡು ಓಟ

ಸಿ.ಬಿ.ಎಸ್.ಇ. ಹಾಗೂ ಐ.ಸಿ.ಎಸ್.ಇ ಶಾಲೆಗಳ ಒಕ್ಕೂಟ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ನಡೆಸಲ್ಪಟ್ಟ, ಗುಡ್ಡಗಾಡು ಓಟದಲ್ಲಿ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಗೆ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆಯಿತು. ಸುಮಾರು ೨೫ ಶಾಲೆಗಳ ೧೫೦ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು. ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಗುರುನಾಥ ಬಾಗೇವಾಡಿಯವರು ಮುಖ್ಯ ಅತಿಥಿಯಾಗಿ ಗುಡ್ಡಗಾಡು ಓಟದ ಬಗ್ಗೆ ಕೆಲವು ಪ್ರಮುಖ ಮಾಹಿತಿಗಳನ್ನು ನೀಡಿದರು. ವಿದ್ಯಾಸಂಸ್ಥೆಗಳ ಸಂಚಾಲಕರಾದ ಕೆ.ಎಸ್. ಕೃಷ್ಣ ಭಟ್‌ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಪ್ರಾಂಶುಪಾಲ […]