ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ ನೂತನ ಕಾರ್ಯದರ್ಶಿಯಾಗಿ ಚಂದ್ರಶೇಖರ ಭಟ್ ಎಸ್.

ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ ನೂತನ ಕಾರ್ಯದರ್ಶಿಯಾಗಿ ಚಂದ್ರಶೇಖರ ಭಟ್ ಎಸ್.

ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ ಇದರ ನೂತನ ಕಾರ್ಯದರ್ಶಿಯಾಗಿ ಮಾದಕಟ್ಟೆ ಈಶ್ವರ ಭಟ್‌ರವರ ನಿಧನದಿಂದ ತೆರವಾಗಿದ್ದ ಕಾರ್ಯದರ್ಶಿ ಹುದ್ದೆಗೆ ಚಂದ್ರಶೇಖರ ಭಟ್ ಎಸ್. ಇವರು ನೇಮಕಗೊಂಡಿರುತ್ತಾರೆ. ತಮ್ಮ ಎಳೆಯ ವಯಸ್ಸಿನಲ್ಲಿಯೇ ಇವರು ಸಂಸ್ಥೆಯ ಬೇರೆ ಬೇರೆ ವಿಭಾಗಗಳಲ್ಲಿ ಸುಮಾರು ೩೮ ವರ್ಷಗಳ ಸೇವೆಯನ್ನು ಸಲ್ಲಿಸಿದ್ದಾರೆ. ಶ್ರೀಯುತರು ಒಳ್ಳೆಯ ಸಂಘಟಕರು, ಸೇವಾ ಮನೋಭಾವದವರು ಹಾಗೂ ಸೃಜನಾತ್ಮಕ ಯೋಚನೆ ಉಳ್ಳವರಾಗಿದ್ದಾರೆ. ಈ ಹಿಂದೆ ಪಿಯುಸಿ ಹಾಸ್ಟೆಲ್ ವಿಭಾಗದ ವಾರ್ಡನ್‌ರಾಗಿ ಸೇವೆ ಸಲ್ಲಿಸಿರುತ್ತಾರೆ.

67ನೇ ಪ್ರಜಾಪ್ರಭುತ್ವ ದಿನಾಚರಣೆ

ನೆಹರೂ, ಗಾಂಧೀಜಿಯವರ ಪೂರ್ಣಸ್ವರಾಜ್ಯದ ಪಣ ತೊಟ್ಟಂತೆ, ಇಂದಿನ ಜನಾಂಗ ಭಯೋತ್ಪಾದನೆಯ ವಿರುದ್ಧ ಧಂಗೆ ಎದ್ದು, ಪ್ರಪಂಚದಾದ್ಯಂತ ಹಬ್ಬುತ್ತಿರುವ ಭಯೋತ್ಪಾದನೆಯನ್ನು ತಡೆಗಟ್ಟುವಲ್ಲಿ ಒಮ್ಮತ ಬರಬೇಕೆಂದು ಅಧ್ಯಾಪಕ ಯಾದವ ಎನ್. ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರ, ಅಳಿಕೆಯ 67ನೇ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಹೇಳಿದರು. ಸಂವಿಧಾನದ ಪ್ರಾಮುಖ್ಯತೆಯನ್ನು ಹಲವಾರು ನಿದರ್ಶನಗಳ ಮೂಲಕ ಮಕ್ಕಳಿಗೆ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಪಿ. ಚಂದ್ರಶೇಖರ್ ತಿಳಿಸಿದರು. ವಿದ್ಯಾಕೇಂದ್ರದ ನಿಲಯಪಾಲಕರಾದ ಜನಾರ್ದನ ಶೆಟ್ಟಿ ಧ್ವಜಾರೋಹಣ ಮಾಡಿ ವಿದ್ಯಾರ್ಥಿಗಳಿಗೆ ಶುಭಾಶಯದ ಮಾತುಗಳನ್ನಾಡಿದರು. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ […]

ಮಡಿಯಾಲ ನಾರಾಯಣ ಭಟ್ ಸ್ಮಾರಕದ ಲೋಕಾರ್ಪಣೆ, ಉದ್ಘಾಟನೆ ಮತ್ತು ಭೂಮಿ ಪೂಜೆ

ಮಡಿಯಾಲ ನಾರಾಯಣ ಭಟ್ ಸ್ಮಾರಕದ ಲೋಕಾರ್ಪಣೆ, ಉದ್ಘಾಟನೆ ಮತ್ತು ಭೂಮಿ ಪೂಜೆ

ದಿನಾಂಕ : 30-11-2015 ಸೋಮವಾರ ಅಳಿಕೆಯ ಮಹಾಚೇತನ, ಅಳಿಕೆಗೆ ಪ್ರಸಿದ್ಧಿಯನ್ನು ತಂದುಕೊಟ್ಟ ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ಸ್ಥಾಪಕರಾಗಿ ಲೋಕ ಪ್ರಸಿದ್ಧರಾದ ಮಡಿಯಾಲ ಶ್ರೀ ನಾರಾಯಣ ಭಟ್ಟರ ಜನ್ಮಸ್ಥಳವನ್ನು ಒಂದು ಸ್ಮಾರಕವಾಗಿ, ಅವರು ಬಳಸಿದ ವಸ್ತುಗಳನ್ನು ಒಂದು ವಸ್ತು ಪ್ರದರ್ಶನಾಲಯವಾಗಿ ರೂಪಿಸಿ ದಿನಾಂಕ ೩೦-೧೧-೨೦೧೫ರಂದು ಅವರ ೮೯ನೇ ಜನ್ಮದಿನದಂದು ಲೋಕಾರ್ಪಣೆ ಮಾಡಲಾಯಿತು. ನಾರಾಯಣ ಭಟ್ಟರ ಕನಸಿನಂತೆ, ಅಳಿಕೆಯಲ್ಲಿ ಬಾಲಕಿಯರಿಗಾಗಿ ಒಂದು ಸನಿವಾಸ ಪದವಿ ಪೂರ್ವ ಕಾಲೇಜನ್ನು ಸ್ಥಾಪಿಸುವ ಸಂಕಲ್ಪ ಮಾಡಲಾಯಿತು. ಅದರ ನೂತನ ಕಟ್ಟಡ ಶ್ರೀ ಸತ್ಯಸಾಯಿ […]

ಶ್ರೀ ಸತ್ಯಸಾಯಿ ಸುಪೀರಿಯರ್ ಆಸ್ಪತ್ರೆಯ ವಿಸ್ತೃತ ನೂತನ ಕಟ್ಟಡದ ಉದ್ಘಾಟನೆ

ಶ್ರೀ ಸತ್ಯಸಾಯಿ ಸುಪೀರಿಯರ್ ಆಸ್ಪತ್ರೆಯ ವಿಸ್ತೃತ ನೂತನ ಕಟ್ಟಡದ ಉದ್ಘಾಟನೆ

ದಿನಾಂಕ : 29-11-2015 ಆದಿತ್ಯವಾರ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆ ಅಳಿಕೆಯ ಶ್ರೀ ಸತ್ಯಸಾಯಿ ಸುಪೀರಿಯರ್ ಆಸ್ಪತ್ರೆಯ ವಿಸ್ತೃತ ನೂತನ ಕಟ್ಟಡದ ಉದ್ಘಾಟನೆಯನ್ನು ಸಿಂಗಾಪುರದ ಖ್ಯಾತ ವೈದ್ಯರಾದ ಡಾ. ರವಿ ಪಿಳ್ಳೆ ನೆರವೇರಿಸಿದರು. ಸಮಾರಂಭದಲ್ಲಿ ಮಧುಸೂದನ ನಾಯ್ಡು, ಸಂಸ್ಥೆಯ ಟ್ರಸ್ಟಿ ಬಿ.ಎನ್. ನರಸಿಂಹಮೂರ್ತಿ, ಅಮೇರಿಕಾದ ವೈದ್ಯರಾದ ಡಾ. ರಾಮ್ ಶೆಟ್ಟಿ, ಮಲೇಷಿಯಾದ ಉದ್ಯಮಿ ಮಿಂಗ್, ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್, ಕಾರ್ಯದರ್ಶಿ ಯಂ. ಈಶ್ವರ ಭಟ್, ರೆಕ್ಟರ್ ಕೃಷ್ಣ ಭಟ್, ವೈದ್ಯಾಧಿಕಾರಿಗಳಾದ ಡಾ. ವಿಜಯಕುಮಾರ್, ಡಾ. ರಮೇಶ್ […]