SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

ಗಣೇಶೋತ್ಸವದ ಕಾರ್ಯಕ್ರಮ

Shakunthala Shetty revised Photoಸ್ವತಂತ್ರ್ಯ ಪೂರ್ವದಲ್ಲಿ ಸಹಬಾಳ್ವೆ, ಸಮಬಾಳ್ವೆ, ಸಾಮರಸ್ಯದ ಪ್ರತೀಕವಾಗಿ ಆಚರಿಸಲ್ಪಡುತ್ತಿದ್ದ ಗಣೇಶ ಹಬ್ಬವು ಇಂದು ಎಲ್ಲ ವರ್ಗದ ಜನರ ಭಾವನೆಗಳಿಗೆ ಸುಲಭವಾಗಿ ಸ್ಪಂದಿಸುತ್ತಿದ್ದ ಭಗವಂತನ ಆರಾಧನೆಯ ಪ್ರತೀಕವಾಗಿ ಮಾರ್ಪಾಡಾಗಿದೆ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ ಹೇಳಿದರು.

ಎಲ್ಲಾ ಧರ್ಮಗಳ ಪರಮ ಉದ್ದೇಶ ಜ್ಞಾನ ಜ್ಯೋತಿಯನ್ನು ಪಡೆಯುವುದೇ ಆಗಿದೆ. ತಿಲಕರಿಂದ ಪ್ರಾರಂಭವಾದ ಗಣೇಶೋತ್ಸವವು ಇಂದು ಮನೆ ಮನೆಗಳಲ್ಲಿ, ಮನ ಮನಗಳಲ್ಲಿ, ರಾಜ್ಯ ರಾಜ್ಯಗಳಲ್ಲಿ ಜನರನ್ನು ಒಂದುಗೂಡಿಸುತ್ತಿದೆ ಎಂದು ವೇದಮೂರ್ತಿ ಶ್ರೀ ಹಿರಣ್ಯ ವೆಂಕಟೇಶ್ವರ ಭಟ್ ಹೇಳಿದರು. ಇವರು ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿ ಗಣೇಶೋತ್ಸವದ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ಮಾಡುತ್ತಾ ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್‌ನ ಅಧ್ಯಕ್ಷ ಯು. ಗಂಗಾಧರ ಭಟ್ ವಹಿಸಿದ್ದರು. ಈಶ್ವರ ಭಟ್, ಕೃಷ್ಣ ಭಟ್ ಸಭೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ವಿ. ದೈವಜ್ಞ ಸ್ವಾಗತಿಸಿ, ವಿದ್ಯಾಕೇಂದ್ರ ಪ್ರಾಂಶುಪಾಲರಾದ ಪಿ. ಚಂದ್ರಶೇಖರ್ ವಂದಿಸಿದರು. ಉಪನ್ಯಾಸಕ ಶ್ರೀಧರ ಕೆ. ಕಾರ್ಯಕ್ರಮ ನಿರೂಪಿಸಿದರು.