Sri Sathya Sai Loka Seva Trust, Alike > News & Events > ಅಳಿಕೆ : ಯಕ್ಷಗಾನ ತಾಳಮದ್ದಳೆ

ಅಳಿಕೆ : ಯಕ್ಷಗಾನ ತಾಳಮದ್ದಳೆ

ವಿದ್ಯಾಗಣಪತಿ ಮಹೋತ್ಸವದ ಅಂಗವಾಗಿ ಅಳಿಕೆ ವಿದ್ಯಾಸಂಸ್ಥೆಯಲ್ಲಿ ಖ್ಯಾತ ಕಲಾವಿದರ ಕೂಡುವಿಕೆಯಿಂದ ಕರ್ಣಭೇದನ ಎಂಬ ಯಕ್ಷಗಾನ ತಾಳಮದ್ದಳೆ ನೆರೆದವರ ಮನಸೂರೆಗೊಂಡಿತು. ಕರ್ಣನಾಗಿ ಕುಂಬ್ಳೆ ಸುಂದರ ರಾವ್, ಕೃಷ್ಣನಾಗಿ ವಾಸುದೇವ ರಂಗ ಭಟ್, ಕುಂತಿಯಾಗಿ ಡಾ. ಕೋಳ್ಯೂರು ರಾಮಚಂದ್ರ ರಾವ್ ಇವರು ಭಾಗವಹಿಸಿದ್ದರು. ಹಿಮ್ಮೇಳದಲ್ಲಿ ಭಾಗವತರು ಗಿರೀಶ್ ರೈ ಕಕ್ಕೆಪದವು, ಚೆಂಡೆ ರಾಮಪ್ರಸಾದ್ ವದ್ವ, ಮದ್ದಳೆ ಚಿ| ಅಕ್ಷಯ ಕುಮಾರ್. ಇತ್ತೀಚೆಗೆ ’ಶ್ರೇಷ್ಠ ಅಧ್ಯಾಪಕ’ ಕೇರಳ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಸಂಸ್ಥೆಯ ಹಿತೈಷಿಗಳಾದ ಶಂಕರ ಸಾರಡ್ಕ ಇವರನ್ನು ಸನ್ಮಾನಿಸಲಾಯಿತು.
Thalamaddale Photo