SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

ತಾಲೂಕು ಮಟ್ಟದ ಬಾಲಕರ ಫುಟ್‌ಬಾಲ್ ಪಂದ್ಯಾಟ


ಬಂಟ್ವಾಳ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕರ ಫುಟ್‌ಬಾಲ್ ಪಂದ್ಯಾಟವು ಇಲಾಖಾ ವತಿಯಿಂದ ಅಳಿಕೆಯಲ್ಲಿ ತಾ.11-09-2018ರಂದು ನಡೆಸಲಾಯಿತು. ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು ಬಾಲಕರ ತಂಡ ಪ್ರಥಮ ಸ್ಥಾನ ಹಾಗೂ ಕಾರ್ಮೆಲ್ ಕಾಲೇಜು, ಮೊಡಂಕಾಪು ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿತು. ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾದ ಶ್ರೀ ಸತ್ಯಸಾಯಿ ಸುಪೀರಿಯರ್ ಆಸ್ಪತ್ರೆಯ ಡಾ| ಪ್ರಜ್ವಲ್ ಡಿ.ಪಿ. ಇವರು ಬಹುಮಾನ ವಿತರಿಸಿದರು. ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಚಂದ್ರಶೇಖರ ಭಟ್ ಯಸ್. ಶುಭ ಹಾರೈಸಿದರು. ಅಶೋಕ ಭಟ್‌ರವರು ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು. ಶ್ರೀನಿವಾಸ್ ಹಾಗೂ ಮೊಡಂಕಾಪಿನ ಸುರೇಶ್ ನಂದೊಟ್ಟು ಉಪಸ್ಥಿತರಿದ್ದರು.