Sri Sathya Sai Loka Seva Trust, Alike > News & Events > ಗಾಂಧಿ ಜಯಂತಿ ಆಚರಣೆ

ಗಾಂಧಿ ಜಯಂತಿ ಆಚರಣೆ

ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯಲ್ಲಿ ಅಕ್ಟೋಬರ್ 2 ರಂದು ಗಾಂಧೀಜಿ ಹಾಗು ಶಾಸ್ತ್ರೀಜೀ ಅವರ ಜನ್ಮ ದಿನವನ್ನು ಆಚರಿಸಲಾಯಿತು. ಇವರ ಭಾವಚಿತ್ರಕ್ಕೆ ಶಿಕ್ಷಕರುಗಳಿಂದ ಪುಷ್ಪ ನಮನ ಸಲ್ಲಿಸಲಾಯಿತು. ವಿದ್ಯಾರ್ಥಿಗಳಿಬ್ಬರು ಈ ದಿನದ ಮಹತ್ವದ ಕುರಿತು ಮಾತನಾಡಿದರು ಶಿಕ್ಷಕ ಅಶೋಕ ಕುಮಾರ್ ಮಾತನಾಡಿ ಗಾಂಧೀಜಿಯವರ ಸರಳತೆ ತತ್ವವನ್ನು ಜೀವನದಲ್ಲಿ ಅಳವಡಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ನಂತರ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲಾ ಸಮೀಪದ ರಸ್ತೆ, ಅಂಗಡಿ ಮಂಭಾಗ, ಶಾಲಾ ವಠಾರದಲ್ಲಿ ಕಸ ಹೆಕ್ಕುದರ ಮೂಲಕ ಸ್ವಚ್ಛತಾ ಆಂದೋಲನವನ್ನು ನಡೆಸಿದರು. ಈ ಎಲ್ಲಾ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಮಧುಸೂದನ್ ಭಟ್, ಉದನೇಶ್ವರ ಭಟ್ ಮತ್ತು ರತ್ನಾಕರ ರೈ ಇವರು ಭಾಗವಹಿಸಿದರು.