Sri Sathya Sai Loka Seva Trust, Alike > News & Events > ಗಾಂಧಿ ಜಯಂತಿ

ಗಾಂಧಿ ಜಯಂತಿ

Gandhi Jayanthi Speech by MI Bhatಭಾರತದ ರಾಷ್ಟ್ರಪಿತ, ಈ ಸಹಸ್ರಮಾನದ ಶ್ರೇಷ್ಠ ವ್ಯಕ್ತಿ ವಿಶ್ವಮಾನ್ಯ ಮಹಾತ್ಮಾ ಗಾಂಧಿಯವರು ಆದರ್ಶ ಜೀವನ ನಡೆಸಿ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ. ಅವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬಾಳನ್ನು ಸಾರ್ಥಕಪಡಿಸಿಕೊಳ್ಳಿ ಎಂದು ಮಾದಕಟ್ಟೆ ಈಶ್ವರ ಭಟ್ ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿ ಅಂಗವಾಗಿ ಧ್ವಜಾರೋಹಣ ಮಾಡಿ ವಿದ್ಯಾರ್ಥಿಗಳಿಗೆ ಕರೆ ಇತ್ತರು.
ವಿದ್ಯಾರ್ಥಿಗಳಾದ ಧೀರಜ್ ಉಪ್ಪಿನ್ ಮತ್ತು ಜಯದೇವ ಎಚ್ – ಗಾಂಧಿ ಮತ್ತು ಲಾಲ್‌ಬಹದ್ದೂರು ಶಾಸ್ತ್ರಿ ಈರ್ವರ ಬದುಕಿನ ಘಟನೆಗಳನ್ನು ಪ್ರಸ್ತುತಪಡಿಸಿ ಗುಣಗಾನ ಮಾಡಿದರು. ಆರಂಭದಲ್ಲಿ ಗಾಂಧೀಜಿಯವರ ಅತ್ಯಂತ ಪ್ರಿಯ ಹಾಡು ವೈಷ್ಣವ ಜನತೋ ವನ್ನು ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದರು.
ಪ್ರಾಂಶುಪಾಲರಾದ ಪ್ರಕಾಶ್ ವಿ. ದೈವಜ್ಞ ಸ್ವಾಗತಿಸಿ, ರಾಜ್ಯಶಾಸ್ತ್ರ ಉಪನ್ಯಾಸಕ ಡಿ. ರಾಮಚಂದ್ರ ರಾವ್ ನಿರ್ವಹಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.