Sri Sathya Sai Loka Seva Trust, Alike > News & Events > ಜೆ. ಸದಾಶಿವ ಭಟ್ ನಿವೃತ್ತ ಅಧ್ಯಾಪಕರು ಪ್ರೌಢಶಾಲೆ ಅಳಿಕೆ ಇವರಿಗೆ ಸನ್ಮಾನ

ಜೆ. ಸದಾಶಿವ ಭಟ್ ನಿವೃತ್ತ ಅಧ್ಯಾಪಕರು ಪ್ರೌಢಶಾಲೆ ಅಳಿಕೆ ಇವರಿಗೆ ಸನ್ಮಾನ

೨೨ ವರ್ಷ ಸೇವೆ ಸಲ್ಲಿಸಿ ಭಡ್ತಿ ಹೊಂದಿ ಅಳಿಕೆ ಪ್ರೌಢಶಾಲೆಯಲ್ಲಿ ೧೭ ವರ್ಷ ಸೇವೆ ಸಲ್ಲಿಸಿ ನಿವೃತ್ತಿಯ ಅಂಚಿನಲ್ಲಿರುವ ಜೆ. ಸದಾಶಿವ ಭಟ್‌ರವರನ್ನು ಶ್ರೀ ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಗೌರವಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕರಾದ ಕೆ. ಸಂಜೀವ ಶೆಟ್ಟಿಯವರು ಸನ್ಮಾನಿತರು ಕರ್ತವ್ಯದಲ್ಲಿ ತೋರಿಸಿದ ನಿಷ್ಠೆಯನ್ನು ಶ್ಲಾಘಿಸಿದರು. ಶಾಲಾ ಸಂಚಾಲಕರಾದ ಮಾದಕಟ್ಟೆ ಈಶ್ವರ ಭಟ್ಟರು ಸನ್ಮಾನಿತರು ಒಬ್ಬ ಸಮರ್ಥ ಪ್ರತಿಭಾವಂತ ಶಿಕ್ಷಕರು ಎಂದು ಹೇಳಿದರು. ನಿವೃತ್ತ ಮುಖ್ಯ ಶಿಕ್ಷಕರಾದ ರುಕ್ಮಯ್ಯ ಗೌಡರು ಸನ್ಮಾನಿತರ ಪರಿಚಯ ಹಾಗೂ ಸಾಧನೆಗಳನ್ನು ತಿಳಿಸಿದರು. ಸನ್ಮಾನಿತರು ತಮ್ಮ ಅನಿಸಿಕೆಗಳನ್ನು ಹೇಳುತ್ತಾ ಈ ಸಂಸ್ಥೆಯಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ಪಾಠ ಬೋಧಿಸಿದ ಅನುಭವವನ್ನು ನೆನಪಿಸಿಕೊಂಡರು. ತಮ್ಮ ಶಿಷ್ಯರು ಈ ಸಂಸ್ಥೆಯಲ್ಲಿ ದುಡಿಯುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಈಶ್ವರ ನಾಯ್ಕ ಸ್ವಾಗತಿಸಿ, ಬಿ. ಸತ್ಯನಾರಾಯಣ ಭಟ್ ವಂದಿಸಿ, ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.