SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ 2016-17

Alike Boys Winners Overall Championship

ದಿ.೧೧-೧೧-೨೦೧೬ರಂದು ಅಳಿಕೆ ಶ್ರೀ ಸತ್ಯಸಾಯಿ ಕ್ರೀಡಾಂಗಣದಲ್ಲಿ ಜರಗಿದ ಬಂಟ್ವಾಳ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗುರುನಾಥ ಬಿ. ಬಾಗೇವಾಡಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ, ಬಂಟ್ವಾಳ ತಾಲೂಕು ಇವರು ವಹಿಸಿ ಬಹುಮಾನವನ್ನು ವಿತರಿಸಿದರು. ವೇದಿಕೆಯಲ್ಲಿ ಚಂದ್ರಶೇಖರ ಭಟ್ ಎಸ್. ಕಾರ್ಯದರ್ಶಿ, ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ, ರಘು ಟಿ.ವೈ., ಪ್ರೌಢಶಾಲಾ, ಮುಖ್ಯೋಪಾಧ್ಯಾಯರು, ಈಶ್ವರ ನಾಯ್ಕ್, ಮುಖ್ಯೋಪಾಧ್ಯಾಯರು, ಪ್ರಾಥಮಿಕ ಶಾಲೆ, ಅಳಿಕೆ, ಪೂವಪ್ಪ ಶೆಟ್ಟಿ, ಅಳಿಕೆ ಉಪಸ್ಥಿತರಿದ್ದರು. ಅಶೋಕ ಭಟ್ ಸ್ವಾಗತಿಸಿ, ರಾಜೇಂದ್ರ ರೈ ವಂದಿಸಿ ಆನಂದ ನಾಯ್ಕ ಧ್ವಜಾ ಅವರೋಹಣ ಕಾರ್ಯಕ್ರಮ ನಿರ್ವಹಿಸಿದರು,

ಫಲಿತಾಂಶದ ವಿವರ :
ಬಾಲಕರ ವಿಭಾಗ :
ಸಮಗ್ರ ತಂಡ ಪ್ರಶಸ್ತಿ ಪ್ರಥಮ ಸ್ಥಾನ  :  ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ
ಸಮಗ್ರ ತಂಡ ಪ್ರಶಸ್ತಿ ದ್ವಿತೀಯ ಸ್ಥಾನ  :  ಕಾರ್ಮೆಲ್ ಕಾನ್ವೆಂಟ್ ಸಂಯುಕ್ತ ಪದವಿ ಪೂರ್ವ ಕಾಲೇಜು, ಮೊಡಂಕಾಪು
ವೈಯಕ್ತಿಕ ಚಾಂಪಿಯನ್  :  ರಾಜೇಶ್, ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ

ಬಾಲಕಿಯರ ವಿಭಾಗ :
ಸಮಗ್ರ ತಂಡ ಪ್ರಶಸ್ತಿ ಪ್ರಥಮ ಸ್ಥಾನ  :  ಜನತಾ ಪದವಿ ಪೂರ್ವ ಕಾಲೇಜು, ಅಡ್ಯನಡ್ಕ
ಸಮಗ್ರ ತಂಡ ಪ್ರಶಸ್ತಿ ದ್ವಿತೀಯ ಸ್ಥಾನ  :  ಶ್ರೀರಾಮ ಪದವಿ ಪೂರ್ವ ಕಾಲೇಜು, ಕಲ್ಲಡ್ಕ
ವೈಯಕ್ತಿಕ ಚಾಂಪಿಯನ್  :  ಯಶಸ್ವಿನಿ, ಜನತಾ ಪಿಯು ಕಾಲೇಜು, ಅಡ್ಯನಡ್ಕ
ಜಾಸ್ಪಿನ್ ಎಸ್.ಎಂ., ಎಸ್.ವಿ.ಎಸ್. ಪಿಯು ಕಾಲೇಜು, ಬಂಟ್ವಾಳ