Sri Sathya Sai Loka Seva Trust, Alike > News & Events > ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ

ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ

Shaikshanika chatuvatike Photoಶ್ರೀ ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆ, ಅಳಿಕೆಯ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆಯು ದಿನಾಂಕ 19-06-2015ರಂದು ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್ ಅವರಿಂದ ದೀಪ ಬೆಳಗುವ ಮೂಲಕ ಜರುಗಿತು.

ಈ ಕಾರ್ಯಕ್ರಮದಲ್ಲಿ ಹಿರಿಯರಾದ ಕೆ. ಕೃಷ್ಣ ಭಟ್, ಕೆ. ಸಂಜೀವ ಶೆಟ್ಟಿ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು.

ನಮ್ಮ ಅಳಿಕೆ ವಿದ್ಯಾಸಂಸ್ಥೆಗಳು ಒಂದು ಸಂಶೋಧನಾ ಕೇಂದ್ರವಿದ್ದಂತೆ. ಶಿಕ್ಷಣದೊಂದಿಗೆ ಸಂಸ್ಕಾರಯುತ ಪ್ರಜೆಗಳನ್ನು ರೂಪಿಸುವುದೇ ನಮ್ಮ ಸಂಸ್ಥೆಯ ಗುರಿಯಾಗಿದೆ ಎಂದು ಯು. ಗಂಗಾಧರ ಭಟ್ ತಮ್ಮ ಅಧ್ಯಕ್ಷ ಭಾಷಣದಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸರಕಾರ, ಸಾಂಸ್ಕೃತಿಕ ಕಾರ್ಯಕ್ರಮ, ನೀತಿ ಶಿಕ್ಷಣ, ಯೋಗ ಶಿಕ್ಷಣ, ಬಾಲವಿಕಾಸ, ಸಾಹಿತ್ಯ ಸಂಘ, ಸ್ಕೌಟ್, ಸೇವಾದಲ, ವಿಜ್ಞಾನ ಸಂಘ, ವಾಚನಾಲಯ, ಸ್ಕೌಟು ಹಾಗೂ ಸೇವಾದಲ ಘಟಕಗಳನ್ನು ಉದ್ಘಾಟಿಸಲಾಯಿತು. ವಿಶ್ರಾಂತ ಮುಖ್ಯೋಪಾಧ್ಯಾಯರಾದ ಎಂ. ರುಕ್ಮಯ್ಯಗೌಡ ಮಕ್ಕಳಿಗೆ ಶಾಲಾ ಸರಕಾರದ ಪ್ರಮಾಣ ವಚನ ಬೋಧಿಸಿದರು. ಶಾಲಾ ಶಿಕ್ಷಕರಾದ ಸತ್ಯನಾರಾಯಣ ಭಟ್ ಸ್ವಾಗತಿಸಿ ಮುಖ್ಯೋಪಾಧ್ಯಾಯರಾದ ಈಶ್ವರ ನಾಯ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೈಹಿಕ ಶಿಕ್ಷಕ ರಾಜೇಂದ್ರ ರೈ ಶಾಲಾ ಸರಕಾರದ ಪ್ರಮಾಣ ವಚನದ ನಿರ್ವಹಣೆಗೈದರು ಗೋಪಾಲಕೃಷ್ಣ ಭಟ್ ವಂದನಾರ್ಪಣೆಗೈದರೆ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಾಂಕೇತಿಕವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.