Sri Sathya Sai Loka Seva Trust, Alike > News & Events > ವಿದ್ಯಾಕೇಂದ್ರ (ಸಿ.ಬಿ.ಎಸ್.ಇ.) ನೂತನ ಪ್ರಾರ್ಥನಾ ಮಂದಿರದ ಉದ್ಘಾಟನೆ

ವಿದ್ಯಾಕೇಂದ್ರ (ಸಿ.ಬಿ.ಎಸ್.ಇ.) ನೂತನ ಪ್ರಾರ್ಥನಾ ಮಂದಿರದ ಉದ್ಘಾಟನೆ

VK Prayer Hall Photoವಿದ್ಯಾರ್ಥಿಗಳು ಪ್ರೇಮ ಸ್ವರೂಪಿಗಳು, ಆತ್ಮ ಸ್ವರೂಪಿಗಳೂ ಆಗಿದ್ದಾರೆ. ಆದರೆ ಅದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು, ವಿಮರ್ಶೆ ಮಾಡಿಕೊಳ್ಳಬೇಕು. ಶಿಕ್ಷಣದ ಅಂತಿಮ ಉದ್ದೇಶ ಚಾರಿತ್ರ್ಯ ನಿರ್ಮಾಣ. ಯಾವುದೇ ಸಂದರ್ಭವಿರಲಿ, ಕಾಲವಿರಲಿ, ಸ್ಥಳವಿರಲಿ ಸರಿಯಾದುದನ್ನು ಮಾಡುವುದೇ ಚಾರಿತ್ರ್ಯ ಎಂದು ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಸೂಕ್ಷ್ಮ ಶರೀರದ ಮಾತನ್ನು ಮಧುಸೂದನ ನಾಯ್ಡು ಅವರು ಹೇಳಿದರು. ಇವರು ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರದ ನೂತನ ಪ್ರಾರ್ಥನಾ ಮಂದಿರದ ಉದ್ಘಾಟಿನಾ ಸಮಾರಂಭದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್ ಅವರು ಪ್ರಾಸ್ತಾವಿಕ ಮಾತನಾಡಿ ಕಟ್ಟಡದ ವಿನ್ಯಾಸಗಾರರಾದ ಬಸವನಗೌಡ ಹಾಗೂ ಹಳೆ ವಿದ್ಯಾರ್ಥಿಗಳು ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಎಲ್ಲರ ಸೇವೆಯನ್ನು ಸ್ಮರಿಸಿಕೊಂಡರು. ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟಿನ ಮುದ್ದೇನಹಳ್ಳಿ ವಿಭಾಗದ ಟ್ರಸ್ಟಿಯಾದ ಬಿ.ಎನ್. ನರಸಿಂಹಮೂರ್ತಿಯವರು ಸತ್ಯಸಾಯಿ ಬಾಬಾರವರ ಸಾಧನೆಗಳ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಅಳಿಕೆಯ ಕಾರ್ಯದರ್ಶಿಗಳಾದ ಯಂ. ಈಶ್ವರ ಭಟ್, ಮುದ್ದೇನಹಳ್ಳಿಯ ಕಾರ್ಯದರ್ಶಿಯವರಾದ ಬಿ. ನಾರಾಯಣ ರಾವ್, ರೆಕ್ಟರ್ ಕೆ.ಎಸ್. ಕೃಷ್ಣಭಟ್, ನಿವೃತ್ತ ಪ್ರಾಂಶುಪಾಲರಾದ ಕೆ. ಸಂಜೀವ ಶೆಟ್ಟಿ, ವೈದ್ಯಾಧಿಕಾರಿಗಳಾದ ಡಾ. ರಮೇಶ್ ರಾವ್ ಕೆ., ಟ್ರಸ್ಟಿ ಮಹೇಂದ್ರ ಎಸ್. ಹೆಗಡೆ, ಹಿರಿಯರಾದ ರಮಾನಂದ ಹೆಚ್., ವಸಂತರಾಜ್ ಕೆ. ಸಭೆಯಲ್ಲಿ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ಉಪನ್ಯಾಸಕರಾದ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.