Sri Sathya Sai Loka Seva Trust, Alike > News & Events > ಏಡ್ಸ್ ಮಹಾಮಾರಿ – ವಿಚಾರ ಸಂಕಿರಣ

ಏಡ್ಸ್ ಮಹಾಮಾರಿ – ವಿಚಾರ ಸಂಕಿರಣ

NSS Photoಎಲ್ಲಾ ರೋಗಗಳಿಗೂ ಮನಸ್ಸೇ ಕಾರಣ. ಪರಿಶುದ್ಧವಾದ ಮನಸ್ಸು ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ. ಭಾರತೀಯ ಸಂಸ್ಕೃತಿಯು ಇಂತಹ ಪರಿಶುದ್ಧವಾದ ಮನಸ್ಸನ್ನು ಹೊಂದುವುದಕ್ಕೆ ಸಹಕಾರಿಯಾಗಿದೆ. ಗುರುಹಿರಿಯರ ಬಗ್ಗೆ ಗೌರವ, ಪರನಾರಿಯರನ್ನು ತಾಯಿಯಂತೆ ಕಾಣುವುದು, ದೈವಶ್ರದ್ಧೆ ಇವೆಲ್ಲ ನಮ್ಮ ಸಂಸ್ಕೃತಿಯ ಮುಖ್ಯಾಂಶಗಳು. ಇವುಗಳ ಪಾಲನೆಯಿಂದ ಏಡ್ಸ್‌ನಂತಹ ಮಹಾಮಾರಿಯನ್ನು ತಡೆಗಟ್ಟುವುದು ಸಾಧ್ಯ ಎಂಬುದಾಗಿ ವಿದ್ಯಾಕೇಂದ್ರದ ನಿವೃತ್ತ ಪ್ರಾಂಶುಪಾಲರಾದ ಕೆ. ಸಂಜೀವ ಶೆಟ್ಟಿ ಹೇಳಿದರು. ದಿನಾಂಕ 06-12-2014ರ ಶನಿವಾರ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಇದರ ವತಿಯಿಂದ ಆಯೋಜಿಸಲ್ಪಟ್ಟ ಏಡ್ಸ್ ಬಗೆಗಿನ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಕೆ. ಸಂಜೀವ ಶೆಟ್ಟಿ ಈ ಮಾತುಗಳನ್ನು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ವಿ. ದೈವಜ್ಷ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಯೋಜನಾಧಿಕಾರಿಗಳಾದ ವೆಂಕಟಕೃಷ್ಣ ಶರ್ಮಾ ಸ್ವಾಗತಿಸಿ, ವಿದ್ಯಾರ್ಥಿ ನಿಖಿಲ್‌ಕೃಷ್ಣ ವಂದಿಸಿದರು.