Sri Sathya Sai Loka Seva Trust, Alike > News & Events > ಶ್ರೀ ವಿದ್ಯಾಗಣಪತಿ ಮಹೋತ್ಸವ

ಶ್ರೀ ವಿದ್ಯಾಗಣಪತಿ ಮಹೋತ್ಸವ

Dr Srinivasa Shetty S

ದಿನಾಂಕ : 05-09-2016 ಬುಧವಾರ
ಸಮಯ : ಅಪರಾಹ್ನ 3:00 ರಿಂದ
ಪ್ರಯತ್ನವೇ ಸಿದ್ಧಿಯ ದಾರಿ
ಡಾ| ಶ್ರೀನಿವಾಸ ಶೆಟ್ಟಿ ಯಸ್., ಸಾಹಿತಿಗಳು, ಮಂಡ್ಯ

ಸಂದರ್ಭಗಳನ್ನು ಅನುಕೂಲಕರವಾಗಿ ತಿರುಗಿಸುವುದರಲ್ಲೇ ಜಾಣ್ಮೆ ಇದೆ. ಗಣೇಶ ನಮಗೆ ಇದನ್ನು ತಿಳಿಸುತ್ತಾನೆ. ದರ್ಶನ ಸಾಹಿತ್ಯ ವಿಶ್ವಕ್ಕೆ ಭಾರತದ ಕೊಡುಗೆ. ಮಗುವುತನವನ್ನು ಬೆಳೆಸಿಕೊಳ್ಳಿ. ಪ್ರಯತ್ನಶೀಲರಾಗಿ. ಪ್ರಯತ್ನದಲ್ಲಿ ಸೋಲಾಗಬಹುದು. ಪ್ರಯತ್ನಕ್ಕೆ ಸೋಲಾಗಬಾರದು. ಗುರಿ ಇಲ್ಲವಾದರೆ ದಾರಿ ಸಿಗದು. ದಿನ ದಿನವೂ ಹೊಸತನವನ್ನು ಬೆಳೆಸಿಕೊಳ್ಳಿ ಎಂದು ಮಂಡ್ಯದ ಸಾಹಿತಿ ಡಾ| ಶ್ರೀನಿವಾಸ ಶೆಟ್ಟಿಯವರು ನುಡಿದರು. ಅವರು ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನಡೆಯುವ ಗಣೇಶೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಗಣೇಶನ ವಿಗ್ರಹಕ್ಕೂ ವಿದ್ಯಾರ್ಥಿ ಜೀವನಕ್ಕೂ ಹತ್ತಿರದ ನಂಟಿದೆ. ಮಣ್ಣಿನ ಮುದ್ದೆ ಸಂಸ್ಕಾರದಿಂದ ಸುಂದರ ರೂಪ ಪಡೆಯುತ್ತದೆ. ಎಲ್ಲಾ ಮಣ್ಣು ವಿಗ್ರಹಕ್ಕೆ ಬರುವುದಿಲ್ಲ. ಆವೆ ಮಣ್ಣೇ ಆಗಬೇಕು. ವಿದ್ಯಾರ್ಥಿಗಳಲ್ಲೂ ಅರ್ಹತೆ ಇರಬೇಕು ಎಂದು ಇನ್ನೋರ್ವ ಭಾಷಣಕಾರ ಕೆ. ಸಂಜೀವ ಶೆಟ್ಟಿ ನುಡಿದರು. ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯು. ಗಂಗಾಧರ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು. ರೆಕ್ಟರ್ ಕೆ.ಎಸ್. ಕೃಷ್ಣ ಭಟ್, ಕಾರ್ಯದರ್ಶಿ ಎಸ್. ಚಂದ್ರಶೇಖರ ಭಟ್, ರಮಾನಂದ ಎಚ್. ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ವಲ್ಲೀಶ, ಶ್ರವಣ ಕೆ.ಯಂ. ಮತ್ತು ವಿನಯ ಶಂಕರ ಉಪಾಧ್ಯಾಯ ಇವರು ಮಾತನಾಡಿದರು. ಪ್ರಾಂಶುಪಾಲರಾದ ಪ್ರಕಾಶ್ ವಿ. ದೈವಜ್ಞ ಸ್ವಾಗತಿಸಿ, ರಾಜ್ಯಶಾಸ್ತ್ರ ಉಪನ್ಯಾಸಕ ರಾಮಚಂದ್ರ ರಾವ್ ಡಿ. ವಂದಿಸಿದರು. ಪೂವಪ್ಪ ಶೆಟ್ಟಿ ಪಿ. ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಿತು.