Sri Sathya Sai Loka Seva Trust, Alike > News & Events > ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ – 2015-16

ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ – 2015-16

Sports Photo

ದಿನಾಂಕ 08-10-2015  ಮತ್ತು  09-10-2015
ಸ್ಥಳ : ಸತ್ಯಸಾಯಿ ಕ್ರೀಡಾಂಗಣ, ಅಳಿಕೆ

ಸಾರ್ವಜನಿಕ ಶಿಕ್ಷಣ ಇಲಾಖೆ, ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ಅಳಿಕೆ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 08-10-2015 ರಂದು 2 ದಿನಗಳ ವಿಟ್ಲ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಸತ್ಯಸಾಯಿ ವಿಹಾರದ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಂಡಿತು. ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶೇಷಶಯನ ಕಾರಿಂಜ, ಮೀನಾಕ್ಷಿ ಡೆವಲಪರ್ಸ್ ಮತ್ತು ಕದಂಬ ಕ್ಯಾನರಿ, ಬೆಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕರಾದ ಉದ್ಯಮಿ ರಾಕೇಶ್ ರೆಡ್ಡಿ, ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿಯವರು ಕ್ರೀಡಾಳುಗಳಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್, ಕಾರ್ಯದರ್ಶಿ ಶ್ರೀ ಈಶ್ವರ ಭಟ್ ಯಂ. ಮತ್ತು ಹಿರಿಯರಾದ ಕೃಷ್ಣ ಭಟ್ ಕೆ.ಎಸ್., ಸಂಜೀವ ಶೆಟ್ಟಿ ಕೆ., ಈಶ್ವರ ನಾಯ್ಕ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ರಘು ಟಿ.ವೈ. ಸ್ವಾಗತಿಸಿ, ಶಿಕ್ಷಕ ಅಶೋಕ ಭಟ್‍ರವರು ವಂದಿಸಿದರು. ಶಿಕ್ಷಕರಾದ ನಾರಾಯಣ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ವೆಂಕಟಕೃಷ್ಣ ಪುತ್ತೂರಾಯ, ನೇಮಿರಾಜ್, ಜಗನ್ನಾಥ ಶೆಟ್ಟಿ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಸತ್ಯಶಂಕರ್ ರೈ ಹಾಗೂ ಜಯ ಪಿ. ಇವರನ್ನು ಸನ್ಮಾನಿಸಲಾಯಿತು. ಕನ್ಯಾನ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಾಜ್ಯ ಪ್ರಶಸ್ತಿ ವಿಜೇತ ದೇವಪ್ಪ ನಾಯ್ಕ್ ಇವರನ್ನು ಸನ್ಮಾನಿಸಲಾಯಿತು.