SRI SATHYA SAI LOKA SEVA TRUST, ALIKE

Alike Educational Institutions

+91 8255 239 236 , 238 736

20-09-2023 ಬೆಳಿಗ್ಗೆ ಕಾರ್ಯಕ್ರಮ

ಓಂ ಶ್ರೀ ಸಾಯಿರಾಮ್
ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಗಳು, ಅಳಿಕೆ
ಶ್ರೀ ವಿದ್ಯಾಗಣಪತಿ ಮಹೋತ್ಸವ
ದಿನಾಂಕ : 20-09-2023 ಬುಧವಾರ
ಸಮಯ : ಪೂರ್ವಾಹ್ನ 10:30ರಿಂದ
ಸಭಾ ಕಾರ್ಯಕ್ರಮ
ಭಾರತೀಯ ಚಿಂತನೆಗಳು ರ‍್ಕಬದ್ಧವಾದದ್ದು ಮತ್ತು ಪ್ರಕೃತಿಗೆ ಪೂರಕವಾದದ್ದು. ಪ್ರತಿಯೊಂದು ಆಚರಣೆಯ ಹಿಂದೆ ಒಂದು ವೈಜ್ಞಾನಿಕ ಸತ್ಯವಿರುತ್ತದೆ. ಭಾರತದ ರಾಷ್ಟ್ರೀಯತೆ ರ‍್ಮ ಸಮೀಕರಣಕ್ಕೆ ಪೂರಕವಾಗಿದೆ. ಆದ್ದರಿಂದಲೇ ಗಣೇಶ ಚತರ‍್ಥಿ ಭಾರತದ ಸ್ವಾತಂತ್ರ‍್ಯಕ್ಕೆ ಕಾರಣವಾದ ಹಬ್ಬಗಳಲ್ಲಿ ಒಂದು ಎನಿಸಿಕೊಂಡಿದೆ. ರಾಮಾಯಣ ಮಹಾಭಾರತಗಳಲ್ಲಿನ ಸರಳ ಜೀವನ ಮೌಲ್ಯ, ಇಲ್ಲಿನ ಭಾಷೆಗಳಲ್ಲಿನ ವೈಜ್ಞಾನಿಕತೆ, ಸಂಗೀತ, ವೇದ, ಕಲೆ, ಯೋಗ, ಕಾಲಗಣನೆ, ಸೊನ್ನೆ ಮತ್ತು ಗಣಿತ ಜಗತ್ತಿಗೆ ಭಾರತ ಕೊಟ್ಟ ಅದ್ಭುತ ಕೊಡುಗೆಗಳು. ವಿಶ್ವಶಾಂತಿಯನ್ನು ಬಯಸುತ್ತಾ ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆಯಲ್ಲಿ ಭಾರತ ಅನಾದಿಕಾಲದಿಂದಲೂ ಜೀವಿಸುತ್ತಿದೆ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಕಜಂಪಾಡಿ ಸುಬ್ರಮಣ್ಯ ಭಟ್ ಇವರು ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಗಣಶೋತ್ಸವ ಕರ‍್ಯಕ್ರಮದಲ್ಲಿ ಮಾತನಾಡಿದರು.
ಇನ್ನರ‍್ವ ಅತಿಥಿಯಾಗಿ ಸಭೆಯಲ್ಲಿ ಉಪಸ್ಥಿತರಿದ್ದ ಶ್ರೀ ಸತ್ಯ ಸಾಯಿ ಲೋಕ ಸೇವಾ ಪ್ರೌಢಶಾಲೆ ಅಳಿಕೆ ಇಲ್ಲಿನ ನಿವೃತ್ತ ಅಧ್ಯಾಪಕರಾದ ಪದ್ಮನಾಭ ಭಟ್ ಮಾತನಾಡುತ್ತಾ ಹಲವು ರ‍್ಷಗಳಿಂದ ನಿರಂತರವಾಗಿ ವಿದ್ಯಾ ಗಣಪತಿ ಮಹೋತ್ಸವವು ಜರಗುತ್ತಿದೆ. ಈ ಎಲ್ಲ ಸಂರ‍್ಭಗಳಲ್ಲಿ ಧರ‍್ಮಿಕ ಉಪನ್ಯಾಸಕ್ಕಾಗಿ ಆಗಮಿಸಿದ ಅನೇಕ ಗಣ್ಯ ಮಹನೀಯರಿಂದ ಅಳಿಕೆಯ ಈ ಭೂಮಿ ಪಾವನಗೊಂಡಿದೆ. ಈ ಪಾವನ ಭೂಮಿಯನ್ನು ಸ್ರ‍್ಶಿಸುತ್ತಾ ಅಧ್ಯಯನ ಮಾಡುತ್ತಿರುವ ವಿದ್ಯರ‍್ಥಿಗಳೆಲ್ಲರೂ ಧನ್ಯರು ಎಂದು ವಿದ್ಯರ‍್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಶ್ರೀ ವಿದ್ಯಾಗಣಪತಿ ಮಹೋತ್ಸವದ ಪ್ರಯುಕ್ತ ರ‍್ಪಡಿಸಲಾಗಿದ್ದ ಈ ಸಭಾ ಕರ‍್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸತ್ಯ ಸಾಯಿ ಲೋಕಸೇವಾ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿಯಾದ ಶ್ರೀ ಕೆಎಸ್ ಕೃಷ್ಣ ಭಟ್ ವಹಿಸಿದ್ದರು. ವೇದಿಕೆಯಲ್ಲಿ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಕರ‍್ಯರ‍್ಶಿ ಹಾಗೂ ಸಂಚಾಲಕರಾದ ಯಸ್. ಚಂದ್ರಶೇಖರ್ ಭಟ್, ಬಂಟ್ವಾಳದ ನಿವೃತ್ತ ತಹಶೀಲ್ದಾರರು ಮಲ್ಲೇಸ್ವಾಮಿ ಉಪಸ್ಥಿತರಿದ್ದರು. ಶ್ರೀ ಸತ್ಯ ಸಾಯಿ ಲೋಕಸೇವಾ ಟ್ರಸ್ಟ್ ನ ಆಡಳಿತಾಧಿಕಾರಿಯಾಗಿರುವ ಜನರ‍್ಧನ್ ನಾಯಕ್ ಯಸ್. ಸ್ವಾಗತಿಸಿ, ಅಧ್ಯಾಪಕರಾದ ನಾರಾಯಣ್ ನಾಯ್ಕ್‌ ವಂದಿಸಿದರು. ಭೌತಶಾಸ್ತ್ರ ಉಪನ್ಯಾಸಕರಾದ ಶ್ರೀಪತಿ ಕರ‍್ಯಕ್ರಮ ನಿರೂಪಿಸಿದರು. ವಿದ್ಯರ‍್ಥಿಗಳಾದ ಯಶವಂತರಾಜ್ ಪಿಯುಸಿ, ದಿಗಂತ್ ಪ್ರಸಾದ್ ವಿದ್ಯಾ ಕೇಂದ್ರ ಹಾಗೂ ವೇದಾಂತ್ ಪ್ರೌಢಶಾಲೆ ಗಣೇಶೋತ್ಸವದ ಮಹತ್ವದ ಬಗ್ಗೆ ಮಾತನಾಡಿದರು. ಸ್ಕಂದ ಡಿ.ಎಸ್. ವಿದ್ಯಾ ಕೇಂದ್ರ ಹಾಗೂ ಅಶ್ವಿನ್ ಕೃಷ್ಣ ಪಿಯುಸಿ ಭಕ್ತಿಗೀತೆ ಹಾಡಿದರು.