SRI SATHYA SAI LOKA SEVA TRUST, ALIKE

Alike Educational Institutions

+91 8255 239 236 , 238 736

ಗಣೇಶ ಚತುರ್ಥಿಯ ಎರಡನೇ ದಿನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರೊ. ಜೆ. ಶಶಿಧರ ಪ್ರಸಾದ್‌

ಪೂರ್ಣವಾದ ಶರಣಾಗತಿ ಇದ್ದರೆ ಪರಮಾತ್ಮನನ್ನು ಒಲಿಸಿಕೊಳ್ಳಬಹುದು. ತಂದೆ, ತಾಯಿ ಗುರುಗಳಿಗೆ ಸರಿಯಾದ ಗೌರವ ನೀಡಿದರೆ, ನಂಬಿಕೊಂಡರೆ ಪರಮಾತ್ಮ ಯಾವತ್ತೂ ಕೈ ಬಿಡಲಾರ ಎಂದು ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿ ನಡೆದ ಗಣೇಶ ಚತುರ್ಥಿಯ ಎರಡನೇ ದಿನ 18-09-2015 ಶುಕ್ರವಾರ ಅಪರಾಹ್ನ 3:00ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಸತ್ಯಸಾಯಿ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿಗಳಾದ ಪ್ರೊ. ಜೆ. ಶಶಿಧರ ಪ್ರಸಾದ್‌ರವರ ಹೇಳಿದರು. ಪುರಾಣ, ರಾಮಾಯಣ, ವೇದ, ಉಪನಿಷತ್ತುಗಳು ನಿಧಿಗಳಂತೆ. ಇವುಗಳ ಜ್ಞಾನವನ್ನು ಪಡೆದವನು ನಿಜವಾದ ಜ್ಞಾನಿಯಾಗುತ್ತಾನೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ. ಕೆ. ಭೈರಪ್ಪನವರು ಹೇಳಿದರು. ಈ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ಶಂಕರ ಸಾರಡ್ಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಅಮೋಘ ಹೆಗಡೆ, ವಿನಯ ಬೆನ್ನೂರು, ಪ್ರಜ್ವಲ್ ಗವಾಳಿ ಗಣಪತಿ ಕುರಿತಾದ ಚಿಂತನೆಯನ್ನು ತೆರೆದಿಟ್ಟರು. ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್, ಕಾರ್ಯದರ್ಶಿ ಯಂ. ಈಶ್ವರ ಭಟ್ ಮತ್ತು ಕೆ. ಎಸ್. ಕೃಷ್ಣ ಭಟ್ ಉಪಸ್ಥಿತರಿದ್ದರು. ಶಾಲೆಯ ಸಂಚಾಲಕರಾದ ಡಾ. ರಮೇಶ್ ರಾವ್ ಕೆ. ಸ್ವಾಗತಿಸಿ, ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ವಿ. ದೈವಜ್ಞ ವಂದಿಸಿದರು. ಅರ್ಥಶಾಸ್ತ್ರ ಉಪನ್ಯಾಸಕರಾದ ಪಿ. ಪೂವಪ್ಪ ಶೆಟ್ಟಿ ನಿರೂಪಿಸಿದರು.