SRI SATHYA SAI LOKA SEVA TRUST, ALIKE

Alike Educational Institutions

+91 8255 239 236 , 238 736

ಸಂಸ್ಥೆಯ ಸಂಸ್ಥಾಪಕರಾದ ಪೂಜ್ಯ ಮಡಿಯಾಲ ಶ್ರೀ ನಾರಾಯಣ ಭಟ್ಟರ 90ನೆಯ ಹುಟ್ಟುಹಬ್ಬದ ಆಚರಣೆ

ಸ್ಥಳ : ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನ
ದಿನಾಂಕ : 30-11-2016 ಬುಧವಾರ
ಸಮಯ : ಸಂಜೆ 5:00 ರಿಂದ

Madiyala Narayana Bhat B.Day Photo
ಸಂಸ್ಕಾರಕ್ಕೆ ಅನುಗುಣವಾಗಿ ತಿದ್ದುವ ಜಾಣ್ಮೆ ಮಡಿಯಾಲ ನಾರಾಯಣ ಭಟ್ಟರಿಗಿತ್ತು

ಅಕ್ಕರೆಯ ಅಣ್ಣನಾಗಿ, ಸಂಕಷ್ಟದಲ್ಲಿ ತಾಯಿಯಾಗಿ, ನಮ್ಮೆಲ್ಲರ ಒಲುಮೆ ಗೌರವಗಳಿಗೆ ಪಾತ್ರರಾಗಿ, ಸತ್ಯಸಾಧಕರ ಮಾರ್ಗದರ್ಶಕರಾಗಿ, ನಾಡಿನ ಕಣ್ಮಣಿಯಾಗಿ ಎಲ್ಲರ ಬಂಧುವಾಗಿ ಬಾಳಿದರು. ಚಿಣ್ಣರಿಗೆ ಅವರ ಮಾತುಗಳು ಆನಂದ ವರ್ಧಕ, ಗೆಳೆಯರಿಗೆ ಆಹ್ಲಾದಕಾರಕ ಮತು ಸಾಧಕರ ಬಳಗಕ್ಕೆ ಮಾರ್ಗದರ್ಶಕ ಎಂಬುದಾಗಿ ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್ ಮಡಿಯಾಲ ನಾರಾಯಣ ಭಟ್ಟರ ೯೦ನೇ ಜನ್ಮದಿನೋತ್ಸವದಂದು ತಿಳಿಸಿದರು.

ತ್ಯಾಗದಿಂದ ತ್ಯಾಗಜೀವಿಗಳ ಕೂಡುವಿಕೆ ಸಾಧ್ಯವಾಯಿತು, ಕರ್ತವ್ಯದೊಂದಿಗೆ ಓದುವ ಪ್ರವೃತ್ತಿ ಬೆಳೆಸಿಕೊಳ್ಳುವುದನ್ನು ಮಡಿಯಾಲ ನಾರಾಯಣ ಭಟ್ಟರು ತಿಳಿಸುತ್ತಿದ್ದರು ಎಂದು ಕನ್ನಡ ಉಪನ್ಯಾಸಕರಾದ ಕೆ. ಶ್ರೀಧರ್ ತಿಳಿಸಿದರು. ಆಸೆಗಳಿಗಾಗಿ ಬದುಕಲ್ಲ, ಆದರ್ಶಗಳಿಗಾಗಿ ಬದುಕು ಮತ್ತು ನಾರಾಯಣ ಭಟ್ಟರ ದಶತತ್ವಗಳನ್ನು ವಿದ್ಯಾಕೇಂದ್ರದ ನಿವೃತ್ತ ಪ್ರಾಂಶುಪಾಲ ಕೆ. ಸಂಜೀವ ಶೆಟ್ಟಿ ತಿಳಿಸಿದರು. ಡಾ| ಹರ್ಷ ಸುರೇಶ, ಮಂಜುನಾಥ ಅಣ್ಣನವರ ಬಗ್ಗೆ ಮಾತನಾಡಿದರು.  ಮಡಿಯಾಲ ನಾರಾಯಣ ಭಟ್ಟರ ಬಗ್ಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯ ಬಹುಮಾನ ವಿಜೇತರ ಪಟ್ಟಿಯನ್ನು ಅರ್ಥಶಾಸ್ತ್ರ ಉಪನ್ಯಾಸಕ ಪೂವಪ್ಪ ಶೆಟ್ಟಿ ಪಿ. ವಾಚಿಸಿದರು. ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ ಭಟ್ ಯಸ್. ವಂದಿಸಿದರು. ವಿದ್ಯಾಕೇಂದ್ರದ ಅಧ್ಯಾಪಕರಾದ ಯಾದವ ಎನ್. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.