SRI SATHYA SAI LOKA SEVA TRUST, ALIKE

Alike Educational Institutions

+91 8255 239 236 , 238 736

ಅಳಿಕೆಯಲ್ಲಿ ಗಣೇಶ ವಿಸರ್ಜನೆ

Ganesha Shobhayathre Photoಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ೨೯-೦೮-೨೦೧೪ರಂದು ಪ್ರತಿಷ್ಠಾಪನೆಯಾದ ಚೌತಿ ಗಣೇಶನ ವಿಸರ್ಜನಾ ಮೆರವಣಿಗೆ ೩೧-೦೮-೨೦೧೪ರಂದು ವಿನೂತನ ಮಾದರಿಯಲ್ಲಿ ನಡೆಯಿತು. ಸುಡುಮದ್ದುಗಳ ಆಟಾಟೋಪಗಳ ಬದಲು ಸಂಸ್ಥೆಯ ವಿದ್ಯಾರ್ಥಿಗಳು ದಾರಿಯುದ್ದಕ್ಕೂ ವಿವಿಧ ರೀತಿಯ ಔಷಧೀಯ ಸಸ್ಯಗಳನ್ನು ನೆಟ್ಟು ಸಮಾಜಕ್ಕೆ ಅರ್ಪಿಸಿದರು. ಪಟಾಕಿ ಒಡೆಯುವುದರಿಂದ ಪ್ರಕೃತಿ-ಪರಿಸರ ಮಾಲಿನ್ಯವಾಗುವುದನ್ನು ತಡೆದು, ಪರಿಸರ ಶುದ್ಧಿಗಾಗಿ ಗಿಡನೆಟ್ಟು ಬೆಳೆಸುವ ಇಲ್ಲಿನ ವಿದ್ಯಾರ್ಥಿಗಳ ಉನ್ನತ ಮನೋಭಾವ ಎಲ್ಲೆಡೆಗಳಿಂದ ಶ್ಲಾಘನೆಗೆ ಪಾತ್ರವಾಯಿತು. ಇಲ್ಲಿನ ವಿದ್ಯಾಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್, ಕಾರ್ಯದರ್ಶಿಗಳಾದ ಯಂ. ಈಶ್ವರ ಭಟ್, ಕೆ.ಯಸ್. ಕೃಷ್ಣ ಭಟ್, ಪ್ರಾಂಶುಪಾಲರುಗಳು, ಮುಖ್ಯೋಪಾಧ್ಯಾಯರು, ವಾರ್ಡನ್ ಹಾಗೂ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಸ್ತು ಸಂಯಮದಿಂದ ಪಾಲ್ಗೊಂಡು ವಿದ್ಯಾರ್ಥಿ ಬ್ಯಾಂಡ್ ವಾದ್ಯಗಳು, ನೃತ್ಯ ವೈವಿಧ್ಯಗಳು, ಭಜನಾ ತಂಡಗಳು ಜನಮನವನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.