SRI SATHYA SAI LOKA SEVA TRUST, ALIKE

Alike Educational Institutions

+91 8255 239 236 , 238 736

ಪೂವಪ್ಪ ಶೆಟ್ಟಿ ಅಳಿಕೆ ಇವರಿಗೆ ಡಾಕ್ಟರೇಟ್ ಪದವಿ

ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾದ ಪೂವಪ್ಪ ಶೆಟ್ಟಿ ಅಳಿಕೆ ಇವರಿಗೆ, ಅಮೇರಿಕಾದ “ದಿ ಯುನಿವರ್ಸಿಟಿ ಆಫ್ ಸೆಂಟ್ರಲ್ ಅಮೇರಿಕಾ-ಬೊಲಿವಿಯಾ” ಸಂಸ್ಥೆಯು, ತನ್ನ ವತಿಯಿಂದ ನೀಡಲಾಗುವ ಅತ್ಯುನ್ನತ ಗೌರವ ಡಾಕ್ಟರೇಟ್ (D.Litt) ಪದವಿಯನ್ನು ದಿನಾಂಕ 26-02-2020ರಂದು ಮುಂಬಯಿಯ ರಿನೈಸೆನ್ಸೆ ಕನ್ವೆನ್ಷನ್ ಹಾಲ್‍ನಲ್ಲಿ ನಡೆದ ಖಾಸಗಿ ಸಮಾರಂಭವೊಂದರಲ್ಲಿ ನೀಡಿ ಗೌರವಿಸಲಾಯಿತು.

 

ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿರುವ ಭಾರತ ಹಾಗೂ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ ಒಳಪಟ್ಟ ಮುಂಬೈಯ “ಡಾ. ಎಸ್. ರಾಧಾಕೃಷ್ಣನ್ ಟೀಚರ್ಸ್ ವೆಲ್ಫೇರ್ ಅಸೋಸಿಯೇಷನ್” ಇವರ ಶಿಫಾರಸಿನ ಮೇರೆಗೆ, ಕಳೆದ 30 ವರ್ಷಗಳಲ್ಲಿ ಶ್ರೀಯುತರು ಅರ್ಥಶಾಸ್ತ್ರ ಉಪನ್ಯಾಸಕ ವೃತ್ತಿ ಜೀವನದಲ್ಲಿ ತಮ್ಮ ಕಾಲೇಜಿಗೆ ತಂದ ದಾಖಲೆಯ ಫಲಿತಾಂಶಕ್ಕೆ ಹಾಗೂ ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಮಾಡಿದ ಅಭೂತಪೂರ್ವ ಸಾಧನೆಗಳನ್ನು ಗುರುತಿಸಿ ಈ ಪದವಿಯನ್ನು ನೀಡಲಾಯಿತು.