SRI SATHYA SAI LOKA SEVA TRUST, ALIKE

Alike Educational Institutions

+91 8255 239 236 , 238 736

ಶ್ರೀ ವಿದ್ಯಾಗಣಪತಿ ಮಹೋತ್ಸವದಂದು ಅತಿಥಿಯಾಗಿ ಪಾಲ್ಗೊಂಡ ಜಿತಕಾಮಾನಂದಜೀ ಮಹರಾಜ್

Jithakamanandaji Photoಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆ, ಇಲ್ಲಿ ದಿನಾಂಕ 17-09-2015 ಗುರುವಾರ, ಅಪರಾಹ್ನ 3:00ಕ್ಕೆ ನಡೆದ ಗಣೇಶೋತ್ಸವದ ಸಭಾ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡು ವಿದ್ಯಾರ್ಥಿಗಳ ಮಾನಸಿಕ ಗುಣಮಟ್ಟ ವಿಕಸನಕ್ಕೆ ಪ್ರೇರೇಪಣೆ ನೀಡಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಿತಕಾಮಾನಂದಜೀ ಮಹರಾಜ್, ಅಧ್ಯಕ್ಷರು, ಶ್ರೀ ರಾಮಕೃಷ್ಣ ಆಶ್ರಮ ಮಂಗಳೂರು ಇವರು ಶಿಕ್ಷಣ ಹಾಗೂ ಸಂಸ್ಕೃತಿ ವಿದ್ಯಾರ್ಥಿಗಳ ಜೀವನದ ಮೇಲೆ ಬೀರುತ್ತಿರುವ ಪ್ರಭಾವಗಳ ಬಗ್ಗೆ ತಿಳಿಸಿದರು. ಚಿಂತೆ ಮತ್ತು ಚಿಂತನೆ ಬಗೆಗಿರುವ ವ್ಯತ್ಯಾಸ ಮಾತು ಕೃತಿಗಳಲ್ಲಿ ವಿದ್ಯಾರ್ಥಿಯ ನಡತೆ ಹೇಗಿರಬೇಕು, ಚಾರಿತ್ರ್ಯ ನಿರ್ಮಾಣದಲ್ಲಿ ಶಿಕ್ಷಣದ ಅಗತ್ಯತೆಯ ಬಗ್ಗೆ ತಿಳಿಸಿದರು. ಮಕ್ಕಳಲ್ಲಿ ಸಂಸ್ಕಾರ ಬೆಳೆಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರದ ಬಗ್ಗೆ ಒತ್ತಿ ಹೇಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್ ವಹಿಸಿದ್ದರು. ಟ್ರಸ್ಟಿ ಕೆ. ಸಂಜೀವ ಶೆಟ್ಟಿ ಸ್ವಾಗತಿಸಿ ಚಂದ್ರಶೇಖರ ಪಿ. ಪ್ರಾಂಶುಪಾಲರು ವಂದಿಸಿದರು.  ರಾಮಚಂದ್ರ ರಾವ್ ಡಿ. ರಾಜ್ಯಶಾಸ್ತ್ರ ಉಪನ್ಯಾಸಕರು ನಿರೂಪಿಸಿದರು.