Sri Sathya Sai Loka Seva Trust, Alike > News & Events > 67ನೇ ಪ್ರಜಾಪ್ರಭುತ್ವ ದಿನಾಚರಣೆ

67ನೇ ಪ್ರಜಾಪ್ರಭುತ್ವ ದಿನಾಚರಣೆ

ನೆಹರೂ, ಗಾಂಧೀಜಿಯವರ ಪೂರ್ಣಸ್ವರಾಜ್ಯದ ಪಣ ತೊಟ್ಟಂತೆ, ಇಂದಿನ ಜನಾಂಗ ಭಯೋತ್ಪಾದನೆಯ ವಿರುದ್ಧ ಧಂಗೆ ಎದ್ದು, ಪ್ರಪಂಚದಾದ್ಯಂತ ಹಬ್ಬುತ್ತಿರುವ ಭಯೋತ್ಪಾದನೆಯನ್ನು ತಡೆಗಟ್ಟುವಲ್ಲಿ ಒಮ್ಮತ ಬರಬೇಕೆಂದು ಅಧ್ಯಾಪಕ ಯಾದವ ಎನ್. ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರ, ಅಳಿಕೆಯ 67ನೇ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಹೇಳಿದರು. ಸಂವಿಧಾನದ ಪ್ರಾಮುಖ್ಯತೆಯನ್ನು ಹಲವಾರು ನಿದರ್ಶನಗಳ ಮೂಲಕ ಮಕ್ಕಳಿಗೆ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಪಿ. ಚಂದ್ರಶೇಖರ್ ತಿಳಿಸಿದರು.

ವಿದ್ಯಾಕೇಂದ್ರದ ನಿಲಯಪಾಲಕರಾದ ಜನಾರ್ದನ ಶೆಟ್ಟಿ ಧ್ವಜಾರೋಹಣ ಮಾಡಿ ವಿದ್ಯಾರ್ಥಿಗಳಿಗೆ ಶುಭಾಶಯದ ಮಾತುಗಳನ್ನಾಡಿದರು. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮನ ಸೆಳೆಯುವಂತಿತ್ತು. ಪ್ರಜ್ವಲ್ ಟಿ. ಕಾರ್ಯಕ್ರಮ ನಿರೂಪಿಸಿದರು. ಶ್ರವಣ್ ಸ್ವಾಗತಿಸಿ, ವೈಭವ್ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು. ಸಿಹಿ ತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.