SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

2ನೇ ದಿನದ ಗಣೇಶೋತ್ಸವ ಕಾರ್ಯಕ್ರಮ

ದಿನಾಂಕ : 03-09-2019 ಮಂಗಳವಾರ
ಸಮಯ : ಪೂರ್ವಾಹ್ನ 10:00ರಿಂದ
ಸಭಾ ಕಾರ್ಯಕ್ರಮ

 
ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ 2ನೇ ದಿನದ ಗಣೇಶೋತ್ಸವದ ಸಂದರ್ಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಟಿ. ಶಕುಂತಳಾ ಶೆಟ್ಟಿಯವರು ವಿದ್ಯಾರ್ಥಿಗಳು ಗಣಪತಿಯ ಸಾಂಕೇತಿಕ ಗುಣಗಳನ್ನು ರೂಢಿಸಿಕೊಳ್ಳಬೇಕು, ತಾಯಿ ಸಮಾಜದಲ್ಲಿ ಹೇಗೆ ಶ್ರೇಷ್ಠಳಾಗುತ್ತಾಳೆ ಎಂಬುದಕ್ಕೆ ಮೌಲ್ಯಾಧಾರಿತ ನಿದರ್ಶನದ ಕಥೆ ಹೇಳಿ ಮಕ್ಕಳಿಗೆ ಶುಭ ಹಾರೈಸಿದರು.

 

ಅಳಿಕೆಯಲ್ಲಿ ಕಲಿತು ಅಳಿಕೆಯ ಶ್ರೇಷ್ಠತೆ ಮತ್ತು ಹಿರಿಮೆ, ಹಿರಿಯರ ತ್ಯಾಗದ ವೈಶಿಷ್ಟ್ಯತೆಯನ್ನು ಹಾಗೂ ಪಾರ್ವತಿ-ಪರಮೇಶ್ವರರ ವಾಹನಗಳು ಪರಸ್ಪರ ವೈರತ್ವವುಳ್ಳವುಗಳಾದರೂ ಪರಸ್ಪರ ಹೇಗೆ ಜೊತೆಗಿವೆಯೋ ಹಾಗೆಯೇ ನಾವೆಲ್ಲರೂ ಏನೇ ಮನಸ್ತಾಪಗಳಿದ್ದರೂ ಪರಸ್ಪರ ಸಾಮರಸ್ಯದಿಂದ ಬದುಕಬೇಕೆಂದು ಹಾಸನ ಜಿಲ್ಲೆಯ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾಧ್ಯಕ್ಷರಾದ ಡಾ| ಕೆ.ಆರ್. ನಾಗರಾಜ್ ತಿಳಿಸಿದರು.

 

ವಿದ್ಯಾರ್ಥಿನಿಯರಾದ ಶ್ರೀರಕ್ಷಾ ಮತ್ತು ಸಿಂಧೂರ ಗಣಪತಿಯ ವಿಶೇಷತೆಯ ಬಗ್ಗೆ ಮಾತನಾಡಿದರು. ಶೋಭಿತ ಮತ್ತು ಶರಣ್ಯ ಗಣಪತಿಯ ಹಾಡನ್ನು ಹಾಡಿದರು. ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್, ಕಾರ್ಯದರ್ಶಿ ಚಂದ್ರಶೇಖರ ಭಟ್ ಯಸ್., ಸಂಚಾಲಕರಾದ ಕೆ.ಎಸ್. ಕೃಷ್ಣ ಭಟ್, ಜಯವಂತ ಭಟ್ ಉಪಸ್ಥಿತರಿದ್ದರು. ಪ್ರೌಢಶಾಲಾ ಅಧ್ಯಾಪಕರಾದ ಪ್ರಶಾಂತ್ ಜೆ. ಸ್ವಾಗತಿಸಿ, ಪ್ರಾಥಮಿಕ ಶಾಲಾ ಶಿಕ್ಷಕರಾದ ಪ್ರವೀಣ್ ಶೆಟ್ಟಿ ವಂದಿಸಿದರು. ಪ್ರೌಢಶಾಲಾ ಅಧ್ಯಾಪಕರಾದ ಸುನಿಲ್ ಎ. ಕಾರ್ಯಕ್ರಮ ನಿರೂಪಿಸಿದರು.