Sri Sathya Sai Loka Seva Trust, Alike > News & Events > ಸಂಯುಕ್ತ ವಾರ್ಷಿಕ ಹಬ್ಬ

ಸಂಯುಕ್ತ ವಾರ್ಷಿಕ ಹಬ್ಬ

HPS Annual Day Sanmana Photoಶಾಲೆಯ ವಿದ್ಯಾರ್ಥಿಗಳು ಕನಸ್ಸನ್ನು ಕಾಣಬೇಕು. ಅದು ನನಸಾಗುವಲ್ಲಿ ಶ್ರಮ ಪಡಬೇಕು. ಅದು ಮುಂದಿನ ಬದುಕಿನ ಶ್ರೇಯಸ್ಸಿಗೆ ಕಾರಣವಾಗುತ್ತದೆ ಎಂದು ಡಾ| ವಿಕ್ರಮ್ ಶೆಟ್ಟಿ ಅಸೋಸಿಯೇಟ್ ಪ್ರೊಫೆಸರ್, ಕೆ.ಎಸ್. ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ ಹೇಳಿದರು. ದಿನಾಂಕ ೨೭-೧೨-೨೦೧೪ರಂದು ಜರಗಿದ ಶ್ರೀ ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ (ಹುಡುಗಿಯರ ವಿಭಾಗ) ಇದರ ಸಂಯುಕ್ತ ವಾರ್ಷಿಕ ಹಬ್ಬದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದ ನಿವೃತ್ತ ಪ್ರಾಂಶುಪಾಲರಾದ ಕೆ. ಸಂಜೀವ ಶೆಟ್ಟಿ ಇವರು ಶ್ರೀ ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಯಶೋದರ ಬಂಗೇರರ ಬಗ್ಗೆ ಅಭಿನಂದನಾ ಭಾಷಣ ಮಾಡಿದರು. ಶಾಲಾ ಮುಖ್ಯೋಪಾಧ್ಯಾಯ ಈಶ್ವರ ನಾಯ್ಕ್ ಶಾಲಾ ವರದಿ ಮತ್ತು ಸನ್ಮಾನ ಪತ್ರ ವಾಚಿಸಿದರು. ಶಾಲಾ ನಿವೃತ್ತ ಮುಖ್ಯ ಶಿಕ್ಷಕರಾದ ಯಶೋದರ ಬಂಗೇರ ಇವರನ್ನು ಸಮಾರಂಭದ ಅಧ್ಯಕ್ಷರೂ, ಸಂಸ್ಥೆಯ ಅಧ್ಯಕ್ಷರೂ ಆದ ಗಂಗಾಧರ ಭಟ್ ಸನ್ಮಾನಿಸಿದರು. ಶಾಲಾ ಶಿಕ್ಷಕರ ವತಿಯಿಂದ ಉಂಗುರ ತೊಡಿಸಿ ಸನ್ಮಾನಿಸಲಾಯಿತು. ಪ್ರೌಢಶಾಲೆಯ ವರದಿಯನ್ನು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಘು ಟಿ.ವೈ.ಯವರು ವಾಚಿಸಿದರು. ವಿಶೇಷ ಬಹುಮಾನಗಳನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೇಂದ್ರ ರೈ ವಾಚಿಸಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕ ಮಾದಕಟ್ಟೆ ಈಶ್ವರ ಭಟ್, ಸಂಸ್ಥೆಯ ಹಾಸ್ಟೆಲ್ ರೆಕ್ಟರ್ ಕೆ.ಎಸ್. ಕೃಷ್ಣ ಭಟ್, ಸ್ವಾತಿ ವಿಕ್ರಮ್ ಶೆಟ್ಟಿ ಉಪಸ್ಥಿತರಿದ್ದರು. ಪ್ರೌಢಶಾಲೆಯ ಶಿಕ್ಷಕಿ ಕು| ಸೌಮ್ಯ ವಂದಿಸಿ, ಸಹ ಶಿಕ್ಷಕ ಬಿ. ಸತ್ಯನಾರಾಯಣ ಭಟ್ ಸ್ವಾಗತಿಸಿ, ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.
ದಿನಾಂಕ ೨೬-೧೨-೨೦೧೪ನೇ ಶುಕ್ರವಾರದಂದು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶಾಲಾ ಸಂಚಾಲಕ ಮಾದಕಟ್ಟೆ ಈಶ್ವರ ಭಟ್ ಅಧ್ಯಕ್ಷತೆಯಲ್ಲಿ ಕನ್ಯಾನ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಕೃಷ್ಣ ಭಟ್ ಮುಖ್ಯ ಅತಿಥಿಗಳಾಗಿದ್ದು ಸಮಾರಂಭದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮವು ನಡೆಯಿತು.