SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

ಶಿಕ್ಷಕ-ರಕ್ಷಕ ಸಮಾಲೋಚನಾ ಸಭೆ

Samalochana Sabheತಂದೆ ತಾಯಿಯರು ಮನೆಯಲ್ಲಿ ಮಕ್ಕಳ ಮುಂದೆ ಅಗೌರವದಿಂದ ನಡೆದುಕೊಂಡರೆ ಅವರ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವುದೆಂದು  ಶ್ರೀ ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆ, ಅಳಿಕೆಯಲ್ಲಿ ದಿನಾಂಕ 25-07-2015ರಂದು ಶನಿವಾರ ಜರಗಿದ ಶಿಕ್ಷಕ-ರಕ್ಷಕ ಸಮಾಲೋಚನಾ ಸಭೆಯಲ್ಲಿ ಸಭಾಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಶಿಕ್ಷಕರಿಗೆ ಮತ್ತು ಮಕ್ಕಳ ಹೆತ್ತವರಿಗೆ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಮತ್ತು ಪೋಷಿಸುವಲ್ಲಿ ಗಮನಿಸಬೇಕಾದ ವಿಚಾರಗಳ ಬಗ್ಗೆ ವಿದ್ಯಾಕೇಂದ್ರದ ನಿವೃತ್ತ ಪ್ರಾಂಶುಪಾಲರಾದ ಕೆ. ಸಂಜೀವ ಶೆಟ್ಟಿ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಮಾದಕಟ್ಟೆ ಈಶ್ವರ ಭಟ್, ರೆಕ್ಟರ್ ಕೆ.ಎಸ್. ಕೃಷ್ಣ ಭಟ್, ರಮಾನಂದ ಹೆಚ್., ವಾರ್ಡನ್ ಉದನೇಶ್ವರ ಭಟ್, ನಿವೃತ್ತ ಶಿಕ್ಷಕಿ ಶಂಕರಿ ಅಮ್ಮ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಮಕ್ಕಳ ಹೆತ್ತವರಾದ ರವಿಶಂಕರ ಮಳಿ, ಅಡ್ಯನಡ್ಕ, ಉಷಾ ಎಸ್., ಸದಾಶಿವ ಅಳಿಕೆ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಸದಾಶಿವ ಮಡಿಯಾಲ ಇವರು ಅನಿಸಿಕೆ ವ್ಯಕ್ತಪಡಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಈಶ್ವರ ನಾಯ್ಕ ಎಸ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಶ್ರೀಮತಿ ಚಂದ್ರಕಲಾ ಪ್ರಾರ್ಥನೆಯನ್ನೂ ಶಿಕ್ಷಕರಾದ ಎಂ. ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ವೇಣುಗೋಪಾಲ ಶೆಟ್ಟಿ ಶಿಕ್ಷಕ ಶಿಕ್ಷಕಿಯರನ್ನು ಪರಿಚಯಿಸಿ, ದೈಹಿಕ ಶಿಕ್ಷಕ ರಾಜೇಂದ್ರ ರೈ ವಂದಿಸಿದರು. ಶಿಕ್ಷಕ ಬಿ. ಸತ್ಯನಾರಾಯಣ ಭಟ್ ನಿರೂಪಿಸಿದರು.