ಶಾಲೆಗಳಲ್ಲಿ ಜಲಮರುಪೂರಣ ಅಗತ್ಯ : ಬಿ.ಇ.ಓ.
ಭವಿಷ್ಯದ ನೀರಿಗಾಗಿ ಇಂದೇ ಜಲಮರುಪೂರಣ ಮಾಡುವುದು ಅಗತ್ಯ. ಶಾಲೆಗಳಲ್ಲಿ ಜಲಮರುಪೂರಣ ಮಾಡುವುದರ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶ್ರೀಶೇಷಶಯನ ಕಾರಿಂಜ ಹೇಳಿದರು. ಅವರು ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಅಳಿಕೆ ಇಲ್ಲಿ ನಡೆದ ತಾಲೂಕು ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಯು.ಗಂಗಾಧರ ಭಟ್ ಇವರು ಮಕ್ಕಳು ಆಟ ಹಾಗೂ ಪಾಠದಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಬೇಕೆಂದು ಹೇಳಿದರು. ಇನ್ನೋರ್ವ ಅತಿಥಿಯಾದ ತಾಲೂಕು – ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀ ಗುರುನಾಥ ಬಾಗೇವಾಡಿಯವರು ಕ್ರೀಡಾಳುಗಳಿಗೆ ಶುಭ ಹಾರೈಸಿದರು. ಸಂಸ್ಥೆಯ ಟ್ರಸ್ಟಿ ಶ್ರೀ ಕೆ.ಎಸ್.ಕೃಷ್ಣ ಭಟ್ ಹಾಗೂ ಕಾರ್ಯದರ್ಶಿ ಶ್ರೀ ಚಂದ್ರಶೇಖರ ಭಟ್ ಇವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ಶ್ರೀ ರಘು ಇವರು ಸ್ವಾಗತಿಸಿ ದೈಹಿಕ ಶಿಕ್ಷಕ ಶ್ರೀ ಅಶೋಕ ಭಟ್ ವಂದಿಸಿದರು. ಸಹಶಿಕ್ಷಕ ಕಾರ್ತಿಕ್ ಎನ್.ಎಲ್. ಕಾರ್ಯಕ್ರಮ ನಿರ್ವಹಿಸಿದರು.
ಫಲಿತಾಂಶ :
1. ಪ್ರಾಥಮಿಕ ಶಾಲಾ ವಿಭಾಗ :
ಬಾಲಕರು : ಪ್ರಥಮ : ಎಸ್.ವಿ.ಎಸ್. ಟೆಂಪಲ್ ಶಾಲೆ, ದ್ವಿತೀಯ : ಎಸ್..ವಿ.ಎಸ್.ವಿದ್ಯಾಗಿರಿ.
ಬಾಲಕಿಯಿರು : ಪ್ರಥಮ :ಎಸ್.ವಿ.ಎಸ್. ಶಾಲೆ, ಬಂಟ್ವಾಳ, ದ್ವಿತೀಯ : ಎಸ್.ವಿ.ಎಸ್. ಟೆಂಪಲ್ ಶಾಲೆ.
2. ಎಂಟನೇ ತರಗತಿ ವಿಭಾಗ :
ಬಾಲಕರು : ಪ್ರಥಮ : ಎಸ್.ವಿ.ಎಸ್.ವಿದ್ಯಾಗಿರಿ, ದ್ವಿತೀಯ : ಸತ್ಯಸಾಯಿ ಪ್ರೌಢಶಾಲೆ, ಅಳಿಕೆ.
ಬಾಲಕಿಯರು : ಪ್ರಥಮ : ಎಸ್.ವಿ.ಎಸ್.ಪ್ರೌಢಶಾಲೆ, ದ್ವಿತೀಯ : ಎಸ್.ವಿ.ಎಸ್.ಟೆಂಪಲ್ ಶಾಲೆ.
3. ಪ್ರೌಢಶಾಲಾ ವಿಭಾಗ :
ಬಾಲಕರು : ಪ್ರಥಮ : ಎಸ್.ವಿ.ಎಸ್., ಟೆಂಪಲ್ ಶಾಲೆ, ದ್ವಿತೀಯ : ಎಸ್.ವಿ.ಎಸ್.ವಿದ್ಯಾಗಿರಿ.
ಬಾಲಕಿಯರು : ಪ್ರಥಮ : ಎಸ್.ವಿ.ಎಸ್.ಟೆಂಪಲ್, ದ್ವಿತೀಯ : ಕಾರ್ಮೆಲ್ ಮೊಡಂಕಾಪು