ಅಳಿಕೆಯ ಸತ್ಯಸಾಯಿ ವಿಹಾರದಲ್ಲಿ ಗುಡ್ಡಗಾಡು ಓಟ
ಸಿ.ಬಿ.ಎಸ್.ಇ. ಹಾಗೂ ಐ.ಸಿ.ಎಸ್.ಇ ಶಾಲೆಗಳ ಒಕ್ಕೂಟ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ನಡೆಸಲ್ಪಟ್ಟ, ಗುಡ್ಡಗಾಡು ಓಟದಲ್ಲಿ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಗೆ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆಯಿತು. ಸುಮಾರು ೨೫ ಶಾಲೆಗಳ ೧೫೦ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು. ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಗುರುನಾಥ ಬಾಗೇವಾಡಿಯವರು ಮುಖ್ಯ ಅತಿಥಿಯಾಗಿ ಗುಡ್ಡಗಾಡು ಓಟದ ಬಗ್ಗೆ ಕೆಲವು ಪ್ರಮುಖ ಮಾಹಿತಿಗಳನ್ನು ನೀಡಿದರು. ವಿದ್ಯಾಸಂಸ್ಥೆಗಳ ಸಂಚಾಲಕರಾದ ಕೆ.ಎಸ್. ಕೃಷ್ಣ ಭಟ್‌ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಪ್ರಾಂಶುಪಾಲ ಕೆ. ಸಂಜೀವ ಶೆಟ್ಟಿಯವರು ಕ್ರೀಡಾ ಸ್ಪೂರ್ತಿಯನ್ನು ಬೆಳೆಸಿಕೊಂಡು ಸರ್ವತೋಮುಖ ಬೆಳವಣಿಗೆಯಾಗಬೇಕೆಂದು ಹೇಳಿ ಆಶೀರ್ವದಿಸಿದರು.
ಪಿಯು ವಿಭಾಗದ ಪ್ರಾಂಶುಪಾಲ ಪ್ರಕಾಶ್ ವಿ. ದೈವಜ್ಞ, ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯರು ರಘು ಟಿ.ವೈ. ಮುಂತಾದವರು ಉಪಸ್ಥಿತರಿದ್ದರು. ಪ್ರಾಂಶುಪಾಲ ಶಿವಕುಮಾರ್ ಎಂ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರಾಧಾಕೃಷ್ಣ ಹೊಳ್ಳ ಹಾಗೂ ಹರೀಶ ಸಿ. ವಂದಿಸಿದರು. ಯಾದವ ಎನ್ ಹಾಗೂ ಶ್ರೀಧರ ಬಿ. ಕಾರ್ಯಕ್ರಮ ನಿರ್ವಹಿಸಿದರು.
ಪ್ರಶಸ್ತಿ ವಿಜೇತರ ಪಟ್ಟಿ
ವಿದ್ಯಾರ್ಥಿಗಳು :
ಹಿರಿಯರ ವಿಭಾಗ (೧೭ ವರ್ಷಕ್ಕಿಂತ ಕೆಳಗಿನವರಿಗೆ) : ಚಂದ್ರಶೇಖರ ಬಿ.ಎಂ., ಸಿದ್ದಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿ
ಕಿರಿಯರ ವಿಭಾಗ (೧೪ ವರ್ಷಕ್ಕಿಂತ ಕೆಳಗಿನವರಿಗೆ) : ಅಮೃತ್, ಶಾರದಾ ವಸತಿ ಶಾಲೆ, ಉಡುಪಿ
ವಿದ್ಯಾರ್ಥಿನಿಯರು :
ಹಿರಿಯರ ವಿಭಾಗ (೧೭ ವರ್ಷಕ್ಕಿಂತ ಕೆಳಗಿನವರಿಗೆ) : ಶ್ವೇತಾ ಆರ್., ವಿದ್ಯೋದಯ ಪಬ್ಲಿಕ್ ಶಾಲೆ, ಉಡುಪಿ
ಕಿರಿಯರ ವಿಭಾಗ (೧೪ ವರ್ಷಕ್ಕಿಂತ ಕೆಳಗಿನವರಿಗೆ) :ರುಚಿತಾ ಕೆ., ಹೊಂಗಿರಣ ಸ್ಕೂಲ್ ಎಕ್ಸಲೆನ್ಸ್, ಸಾಗರ