ಹೆತ್ತವರ ಮತ್ತು ಶಿಕ್ಷಕರ ಸಮಾವೇಶ
ದಿನಾಂಕ 15-07-2018ರ ಭಾನುವಾರ ಶ್ರೀ ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆ, ವಾಣಿವಿಹಾರ, ಅಳಿಕೆ ಇದರ ಹೆತ್ತವರ ಮತ್ತು ಶಿಕ್ಷಕರ ಸಮಾವೇಶದಲ್ಲಿ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರ ಶೈಕ್ಷಣಿಕ ಮತ್ತು ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರ ಜೊತೆಗೆ ಹೆತ್ತವರ ಪಾತ್ರವೂ ಬಹು ಮುಖ್ಯ ಎಂದು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್ ಹೇಳಿದರು. ವಿದ್ಯಾಸಂಸ್ಥೆಗಳ ಸಂಚಾಲಕರಾದ ಕೆ.ಯಸ್. ಕೃಷ್ಣ ಭಟ್ ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಚಂದ್ರಶೇಖರ ಭಟ್, ನೈತಿಕ ಶಿಕ್ಷಣ ಶಿಕ್ಷಕರಾದ ರತ್ನಾಕರ ರೈಯವರು, ನಿವೃತ್ತ ಮುಖ್ಯ ಶಿಕ್ಷಕ ರುಕ್ಮಯ ಗೌಡ ಇವರು ಮಾತನಾಡಿದರು.
ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪದ್ಮನಾಭ ಪೂಜಾರಿಯವರು ಮಾತನಾಡುತ್ತಾ ಗ್ರಾಮ ಪಂಚಾಯತ್ ವತಿಯಿಂದ ಶಾಲೆಗೆ ಸಹಕಾರ ನೀಡುವುದಾಗಿ ತಿಳಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಜನಾರ್ದನ ನಾಯಕ್ ಯಸ್., ನಿವೃತ್ತ ಮುಖ್ಯ ಶಿಕ್ಷಕ ಮಧುಸೂದನ ಭಟ್, ಯೋಗ ಶಿಕ್ಷಕ ಆನಂದ ಶೆಟ್ಟಿ, ಪಂಚಾಯತ್ ಸದಸ್ಯ ಸದಾಶಿವ ಶೆಟ್ಟಿ ಮಡಿಯಾಲ ಉಪಸ್ಥಿತರಿದ್ದರು. ಹೆತ್ತವರ ಪರವಾಗಿ ಗಣೇಶ ಮೂರ್ತಿ ಉಪನ್ಯಾಸಕರು, ಶ್ರೀಮತಿ ಪ್ರೇಮಲತ ಆರ್. ರೈ, ಸುಧಾಕರ ಯಸ್., ಶ್ರೀಮತಿ ಲೀಲಾವತಿ ತಮ್ಮ ಅನಿಸಿಕೆಗಳನ್ನು ಹೇಳಿದರು. ಶಾಲಾ ಮುಖ್ಯೋಪಾಧ್ಯಾಯರಾದ ಯಸ್. ಈಶ್ವರ ನಾಯ್ಕ ಶಾಲಾ ಶೈಕ್ಷಣಿಕ ವರದಿ ಮಂಡಿಸಿ ಶಿಕ್ಷಕ-ಶಿಕ್ಷಕಿಯರ ಪರಿಚಯ ಮಾಡಿದರು. ಸಹ ಶಿಕ್ಷಕ ರಾಜೇಂದ್ರ ರೈಯವರು ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷರು ರಚಿಸಿದ ಗೀತೆಯನ್ನು ಶಾಲಾ ಶಿಕ್ಷಕಿಯರು ಸಾಮೂಹಿಕವಾಗಿ ಹಾಡಿದರು. ಶ್ರೀಮತಿ ಅನುಲಾ ರೈಯವರು ಪ್ರಾರ್ಥನೆ ಮಾಡಿದರು. ಸಹ ಶಿಕ್ಷಕ ಎಂ. ಗೋಪಾಲಕೃಷ್ಣ ಭಟ್ ಧನ್ಯವಾದ ಅರ್ಪಿಸಿದರು. ಶಿಕ್ಷಕ ವೇಣುಗೋಪಾಲ ಶೆಟ್ಟಿಯವರು ಕಾರ್ಯಕ್ರಮ ಸಂಯೋಜಿಸಿದರು.