ಎಸ್.ಎಸ್.ಎಲ್.ಸಿ ಪರೀಕ್ಷೆ 2020ರ ಫಲಿತಾಂಶ ವಿವರ
2020 ರ ಜೂನ್–ಜುಲೈ ತಿಂಗಳಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯ 116 ಮಂದಿ ವಿದ್ಯಾರ್ಥಿಗಳು ನೊಂದಾಯಿಸಿ 111 ಮಂದಿ ಉತ್ತೀರ್ಣರಾಗಿ ಶೇ95.7% ಫಲಿತಾಂಶ ಬಂದಿರುತ್ತದೆ.
ಆಂಗ್ಲ ಮಾಧ್ಯಮದಲ್ಲಿ ಶೇ.100 ಫಲಿತಾಂಶ ಬಂದಿರುತ್ತದೆ. 58 ವಿದ್ಯಾರ್ಥಿಗಳು ಹಾಜರಾಗಿ ಎಲ್ಲರೂ ಉತ್ತೀರ್ಣರಾಗಿರುತ್ತಾರೆ. ಆ ಪೈಕಿ 38 ಮಂದಿ ವಿಶಿಷ್ಠ ಶ್ರೇಣಿಯಲ್ಲಿ, ಹಾಗೂ 20 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಸುಮುಖ ಸುಬ್ರಹ್ಮಣ್ಯ ಶೆಟ್ಟಿ 625ರಲ್ಲಿ 624 ಅಂಕ ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ ಮತ್ತು ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾನೆ ಹಾಗೂ ಅನಘ ಭಾರದ್ವಜ್ 625 ರಲ್ಲಿ 621 ಅಂಕ ಪಡೆದು ಶಾಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾನೆ.
ಕನ್ನಡ ಮಾಧ್ಯಮದಲ್ಲಿ 58 ಮಂದಿ ಪರೀಕ್ಷೆಗೆ ಹಾಜರಾಗಿ 53 ಮಂದಿ ಉತೀರ್ಣರಾಗಿ ಶೇ 91.37% ಫಲಿತಾಂಶ ಬಂದಿರುತ್ತದೆ. ಅವರ ಪೈಕಿ 13 ಮಂದಿ ವಿಶಿಷ್ಠ ಶ್ರೇಣಿಯಲ್ಲಿ, 38 ಮಂದಿ ಪ್ರಥಮ ಶ್ರೇಣಿಯಲ್ಲಿ, ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಐದು ಮಂದಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಅನಾರೋಗ್ಯ ನಿಮಿತ್ತ ಒಬ್ಬ ವಿದ್ಯಾರ್ಥಿಯು ಪರೀಕ್ಷೆಗೆ ಗೈರು ಹಾಜರಾಗಿರುತ್ತಾನೆ. ವಿದ್ಯಾರ್ಥಿನಿಯರಾದ ಮೋಕ್ಷಿತಾ ಎನ್ ಮತ್ತು ನಿಕ್ಷಿತಾ 625 ರಲ್ಲಿ 601 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ ಹಾಗೂ ಪ್ರಜ್ವಲ್‍ಕುಮಾರ್ ಬಿ ಶಿರಗುಂಪಿ 625 ರಲ್ಲಿ 590 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿರುತ್ತಾನೆ.
ಪರೀಕ್ಷೆಗೆ ಹಾಜರಾದ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮದ ಒಟ್ಟು 116 ವಿದ್ಯಾರ್ಥಿಗಳಲ್ಲಿ 38 ಮಂದಿ A+ ಶ್ರೇಣಿಯಲ್ಲಿ ಹಾಗೂ 27 ಮಂದಿ A ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.