75th Indian Independence Day Celebration
ಶ್ರೀ ಸತ್ಯಸಾಯಿ ಲೋಕ ಸೇವಾ ಹಿರಿಯ ಪ್ರಾಥಮಿಕ ಶಾಲೆ ಅಳಿಕೆಯಲ್ಲಿ ಸ್ವಾತಂತ್ರ್ಯದ ಅಮೃತ
ಮಹೋತ್ಸವವು ವಿವಿಧ ಕಾರ್ಯಕ್ರಮಗಳನ್ನೊಳಗೊಂಡ ಈ ಕಾರ್ಯಕ್ರಮವು ಬೆಳಗ್ಗೆ 8.30ಕ್ಕೆ ಮಕ್ಕಳ
ಮೆರವಣಿಗೆಯೊಂದಿಗೆ ಆರಂಭಗೊಂಡಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಗತಿಪರ
ಕೃಷಿಕರಾದ ನಗ್ರಿಮೂಲೆ ಈಶ್ವರಭಟ್ ಧ್ವಜಾರೋಹಣಗೈದು ಮಕ್ಕಳು ಸಂಸ್ಕಾರಯುತ ಶಿಕ್ಷಣ ಪಡೆದಾಗ
ಮಾತ್ರ ಸ್ವಾತಂತ್ರ್ಯವನ್ನು ಅನುಭವಿಸಲು ಸಾಧ್ಯ ಎಂದು ಸಭೆಯನ್ನು ಉದ್ದೇಶಿಸಿ ನುಡಿದರು.
ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿವೃತ್ತ ಮುಖ್ಯೋ ಪಾಧ್ಯಾಯರಾದ ಮಧುಸೂದನ ಭಟ್ ಅವರು
ಸ್ವಚ್ಛ ಭಾರತ ಹಾಗೂ ಸ್ವಾವಲಂಬನೆಯ ಪರಿಕಲ್ಪನೆಯ ವಿಚಾರವಾಗಿ ಮಾತನಾಡಿದರು. ಶಾಲಾ
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಶಾಲಾ ಮುಖ್ಯ ಶಿಕ್ಷಕ ಈಶ್ವರ ನಾಯ್ಕ ಎಸ್ ಸ್ವಾಗತ ಮತ್ತು
ಪ್ರಾಸ್ತಾವಿಕವಾಗಿ ಮಾತಾಡಿದರು. ಸಭೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಷಣ, ಹಾಡು,
ಸ್ಯಾಕ್ಸೋಫೋನ್ ವಾದನ ಇತ್ಯಾದಿ ಕಾರ್ಯಕ್ರಮ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಜೇಂದ್ರ ರೈ ಅವರು
ಧನ್ಯವಾದಗೈದರು, ಪ್ರವೀಣ್ ಶೆಟ್ಟಿ ನಿರೂಪಿಸಿದರು. ಸಭಾಕಾರ್ಯಕ್ರಮದ ನಂತರ ಮಕ್ಕಳಿಂದ ವಿವಿಧ
ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.