ಧರ್ಮಸ್ಥಳ ಧರ್ಮಾಧಿಕಾರಿ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ಸನ್ಮಾನ
ಅಳಿಕೆ ಶ್ರೀ ಸತ್ಯ ಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ವತಿಯಿಂದ ಧರ್ಮಸ್ಥಳ ಧರ್ಮಾಧಿಕಾರಿ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡ ಶುಭ ಸಂದರ್ಭದಲ್ಲಿ, ಅಳಿಕೆ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ಚಂದ್ರಶೇಖರ ಭಟ್ ಎಸ್, ಹಿರಿಯರಾದ ಶ್ರೀ ಉದನೇಶ್ವರ ಭಟ್, ಶ್ರೀ ಆನಂದ ಶೆಟ್ಟಿ, ಶ್ರೀ ಚಂದ್ರಶೇಖರ ಪಿ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು ಮತ್ತು ಬ್ಯಾಂಡ್ ಮಾಸ್ಟರ್ ಶ್ರೀ ದಿನೇಶ್ರವರ ನೇತೃತ್ವದ ಸಂಸ್ಥೆಯ ಸಾಯಿ ಸಿಂಪೆÇೀನಿ ಬ್ಯಾಂಡ್ ತಂಡದೊಂದಿಗೆ ದಿನಾಂಕ 16.08.2022 ನೇ ಮಂಗಳವಾರ ಧರ್ಮಸ್ಥಳದ ಬೀಡಿನಲ್ಲಿ ಬ್ಯಾಂಡ್ ಗೌರವ ರಕ್ಷೆಯೊಂದಿಗೆ ತೆರಳಿ ಗೌರವಿಸಲಾಯಿತು.
ಗೌರವ ರಕ್ಷೆಯನ್ನು ಸ್ವೀಕರಿಸಿ ಸಂಸ್ಥೆಯ ಏಲ್ಲಾ ವಿದ್ಯಾರ್ಥಿಗಳನ್ನು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪೂಜ್ಯ ಖಾವಂದರು ಅಳಿಕೆ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಅದ್ಯಕ್ಷರಾದ ಅಣ್ಣನವರ ಕಾಲದಿಂದಲೇ ಸುಮಾರು 50 ವರ್ಷಗಳ ಉತ್ತಮ ಸಂಬಂಧದ ಬಗ್ಗೆ ನೆನಪಿಸಿಕೊಂಡರು. ನಮ್ಮ ರಾಜ್ಯದಲ್ಲಿ ಮಾನವೀಯ ಮೌಲ್ಯ ಶಿಕ್ಷಣದೊಂದಿಗೆ ಸಂಸ್ಕಾರ ಕೊಡುವ ವಿದ್ಯಾಸಂಸ್ಥೆಗಳಲ್ಲಿ ಶ್ರೀ ರಾಮಕೃಷ್ಣ ಆಶ್ರಮದಂತೆ ಅಳಿಕೆ ವಿದ್ಯಾಸಂಸ್ಥೆಯು ಕೂಡಾ ಮುಂಚೂಣಿಯಲ್ಲಿದ್ದು ಹೆಸರುವಾಸಿಯಾಗಿದೆ. ವಿದ್ಯಾರ್ಥಿಗಳು ಅಳಿಕೆಯಲ್ಲಿ ಸಿಗುವ ಈ ಅಮೂಲ್ಯ ಸಂಸ್ಕಾರಯುತವಾದ ಮಾನವೀಯ ಮೌಲ್ಯಭರಿತ ಶಿಕ್ಷಣದ ಅವಕಾಶವನ್ನು ಸದ್ವಿನಿಯೋಗ ಮಾಡಿಕೊಂಡು ಕೀಳು ಮಾನಸಿಕತೆಯನ್ನು ದೂರ ಮಾಡಿ, ಉನ್ನತ ಚಿಂತನೆಗಳೊಂದಿಗೆ ಮತ್ತು ಮೇಲ್ಮಟ್ಟದ, ಆದರ್ಶ ಪ್ರಾಯ ಜೀವನ ನಡೆಸುವಂತಾಗಲಿ ಎಲ್ಲರಿಗೂ ಯಶಸ್ಸಾಗಲಿ ಎಂದು ಆಶೀರ್ವದಿಸುತ್ತಾ, ಸಂಸ್ಥೆಗೆ ಕಂಚಿನ ಉಯ್ಶಾಲೆಯಲ್ಲಿ ತೂಗುವ ಗಣಪತಿಯ ಸ್ಮರಣಿಕೆ ನೀಡಿ ಶುಭ ಹಾರೈಸಿದರು. ಸುಮಾರು 60 ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆಲ್ಲರಿಗೂ ಸ್ವರ್ಣಲೇಪಿತ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪೂಜಾ ನಾಣ್ಯಗಳನ್ನು ಸ್ವಹಸ್ತದಿಂದ ಹರಸಿದರು.