ವಾರ್ಷಿಕ ವಿಜ್ಞಾನ ಮತ್ತು ಕಲಾ ಉತ್ಸವ “ಸಾಯಿ ಅನ್ವೇಷಣ್ 2022-23”
ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ ಅಳಿಕೆ ಇಲ್ಲಿ ನಡೆದ ವಾರ್ಷಿಕ ವಿಜ್ಞಾನ ಮತ್ತು ಕಲಾ ಉತ್ಸವ “ಸಾಯಿ ಅನ್ವೇಷಣ್” ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಈ ಪ್ರದರ್ಶನದಲ್ಲಿ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ಸುಮಾರು 50 ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳು, ಆಧುನಿಕ ತಂತ್ರಜ್ಞಾನವನ್ನು ಬಳಸಿ ಅಟಲ್‌ಟಿಂಕರಿಂಗ್ ಲ್ಯಾಬ್‌ನಲ್ಲಿ ನಿರ್ಮಿಸಿದ ವಿವಿಧ ಮಾದರಿಗಳು ಪ್ರದರ್ಶಿಸಲ್ಪಟ್ಟವು. “ಶ್ರೀ ಸಾಯಿ ಇಕೋ ಕ್ಷಬ್” ವತಿಯಿಂದ ಸುಮಾರು 1000 ಕ್ಕೂ ಅಧಿಕ ಗಿಡಗಳು, ಪಕ್ಷಿಗಳನ್ನು ಪ್ರದರ್ಶಿಸಿದ ರೀತಿ ಅಕರ್ಷಕವಾಗಿತ್ತು. ಅಂಚೆ ಚೀಟಿ, ಹಳೆಕಾಲದ ಗೃಹೋಪಕರಣಗಳು, ನಾಣ್ಯಗಳು, ಹಲವು ಬಗೆಯ ತಿಂಡಿ ತಿನಿಸುಗಳು ಹಾಗೂ ಕ್ರೀಡಾ ಪರಿಕರಗಳು ಎಲ್ಲರ ಕಣ್ಮನ ಸೆಳೆದವು.
ಕಾರ್ಯಕ್ರಮಕ್ಕೆ ಮೆರುಗು ನೀಡಲು ನಮ್ಮ ಶಾಲಾ ವಿದ್ಯಾರ್ಥಿಗಳಿಂದ ಹುಲಿ ಕುಣಿತ, ಚೆಂಡೆವಾದನಗಳು ನೋಡುಗರನ್ನು ಆಕರ್ಷಿಸಿತು.
ಈ ಕಾರ್ಯಕ್ರಮವು ಶ್ರೀ ಕೆ ಎಸ್ ಕೃಷ್ಣ ಭಟ್ ಇವರ ಅಧ್ಯಕ್ಷತೆಯಲ್ಲಿ ಮತ್ತು ಶ್ರೀ ಚಂದ್ರಶೇಖರ ಭಟ್ ಇವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವುದರೊಂದಿಗೆ ಆರಂಭಗೊಂಡಿತು. ಶ್ರೀ ವಿ ಎನ್ ಸುದರ್ಶನ್ ಪಡಿಯಾರ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಅರವಿಂದ್ ಕುಡ್ಲ ಇವರು ಆಗಮಿಸಿ ಮಕ್ಕಳಿಗೆ ಆಶೀರ್ವದಿಸಿದರು. ಮುಖ್ಯೋಪಾಧ್ಯಾರಾದ ಶ್ರೀ ರಘು ಟಿ.ವೈ. ಇವರು ಎಲ್ಲರನ್ನು ಪ್ರೀತಿಯಿಂದ ಸ್ವಾಗತಿಸಿದರು. ಸಹ ಶಿಕ್ಷಕರಾದ ಸುನಿಲ್ ಇವರು ವಂದಿಸಿದರು. ಈ ಕಾರ್ಯಕ್ರಮನ್ನು ಸಹ ಶಿಕ್ಷಕರಾದ ಅಶೋಕ ಕುಮಾರ ಎ ಇವರ ನಿರೂಪಿಸಿದರು.