SRI SATHYA SAI LOKA SEVA TRUST, ALIKE

Alike Educational Institutions

+91 8255 239 236 , 238 736

19-9-2023 ಸಂಜೆ ಕಾರ್ಯಕ್ರಮ

ಓಂ ಶ್ರೀ ಸಾಯಿರಾಮ್
ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಗಳು, ಅಳಿಕೆ
ಶ್ರೀ ವಿದ್ಯಾಗಣಪತಿ ಮಹೋತ್ಸವ
ದಿನಾಂಕ : 19-09-2023 ಮಂಗಳವಾರ
ಸಮಯ : ಅಪರಾಹ್ನ 2:30ರಿಂದ
ಸಭಾ ಕಾರ್ಯಕ್ರಮ

ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯಲ್ಲಿ ಜರಗಿದ ವಿದ್ಯಾಗಣಪತಿ ಮಹೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಡಾ| ಸಂಗಮೇಶ್ ಕೋಳ್ಯಾವರ್, ಮೆಡಿಕಲ್ ಡೈರೆಕ್ಟರ್, ಆಶ್ರಯ ಹಾಸ್ಪಿಟಲ್, ಬೆಂಗಳೂರು ಇವರು ಭಕ್ತಿ ಮತ್ತು ಭಾವೈಕ್ಯತೆಯ ಜೊತೆಗೆ ಗಣೇಶ ಚತುರ್ಥಿಯ ಮಹತ್ವದ ಬಗ್ಗೆ ತಿಳಿಸಿ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಹಾಗೂ ಭಜನೆಯ ಜೊತೆಗೆ ಶಿಕ್ಷಣದ ಮಹತ್ವದ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.ಇನ್ನೋರ್ವ ಅತಿಥಿಗಳಾಗಿ ಭಾಗವಹಿಸಿದ ಮಹೇಶ್ ಕೋಳ್ಯಾವರ್, ಮ್ಯಾನೇಜಿಂಗ್ ಡೈರೆಕ್ಟರ್, ಎಸ್.ಎಸ್.ಪ್ರೊ. ಫ್ಯಾಷನ್ ಐ.ಎಸ್.ಸಿ. ಪ್ರೆ.ಲಿ. ಬೆಳಗಾವಿ ಇವರು ಗುರುಗಳ ಮಹತ್ವ ಹಾಗೂ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಜೀವನವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳಬೇಕು ಜೊತೆಗೆ ಶಿಸ್ತು, ಸಂಯಮ ಹಾಗೂ ತಾಳ್ಮೆ ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೆ.ಎಸ್. ಕೃಷ್ಣ ಭಟ್, ಮ್ಯಾನೇಜಿಂಗ್ ಟ್ರಸ್ಟೀ, ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಜನಾರ್ಧನ ನಾಯಕ್ ಎಸ್. ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಮತ್ತು ಸಂಚಾಲಕರಾದ ಎಸ್. ಚಂದ್ರಶೇಖರ ಭಟ್ ಸ್ವಾಗತಿಸಿ, ವಿದ್ಯಾಕೇಂದ್ರದ ಪ್ರಾಂಶುಪಾಲರಾದ ಶಿವಕುಮಾರ್ ಯಂ. ವಂದಿಸಿದರು. ಪದವಿ ಪೂರ್ವ ಕಾಲೇಜಿನ ಸಮಾಜಶಾಸ್ತç ಉಪನ್ಯಾಸಕರಾದ ಉದಯ ನಾಯ್ಕ್ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳಾದ ಎ.ಜೆ. ಚಿಕ್ಕೇಗೌಡ, ತೇಜಸ್ ಎಸ್.ಬಿ. ಮತ್ತು ಪ್ರೀತಮ್ ಗಣೇಶ ಹಬ್ಬದ ಮಹತ್ವದ ಬಗ್ಗೆಮಾತನಾಡಿ, ವಿದ್ಯಾರ್ಥಿ ಅಭಿಜ್ವಲ್ ಮತ್ತು ನಿಖಿಲ್ ಸಿ. ಹಾಡಿದರು.