SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

20-9-2023 ಸಂಜೆ ಸಭಾ ಕಾರ್ಯಕ್ರಮ

ಓಂ ಶ್ರೀ ಸಾಯಿರಾಮ್
ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಗಳು, ಅಳಿಕೆ
ಶ್ರೀ ವಿದ್ಯಾಗಣಪತಿ ಮಹೋತ್ಸವ
ದಿನಾಂಕ : 20-09-2023 ಬುಧವಾರ
ಸಮಯ : ಅಪರಾಹ್ನ 2:30ರಿಂದ
ಸಭಾ ಕಾರ್ಯಕ್ರಮ
ಗಣೇಶ ಚತುರ್ಥಿಯು ಸಾರ್ವಜನಿಕ ಆಚರಣೆಯ ಸ್ವರೂಪವನ್ನು ಪಡೆದುಕೊಂಡ ರೀತಿ, ಬ್ರಿಟೀಷ್ ದುರಾಡಳಿತದ ವಿರುದ್ಧ ತಿಲಕರು ಆರಂಭಿಸಿದ ಪರೋಕ್ಷ ಹೋರಾಟ, ತಿಲಕರು ಬ್ರಿಟೀಷರ ವಿರುದ್ಧ ಭಾರತ ಸ್ವಾತಂತ್ರ್ಯ ದ ಪ್ರತಿಭಟನೆಗೆ ಗಣೇಶೋತ್ಸವ ಹಬ್ಬವನ್ನು ಕೇಂದ್ರ ಬಿಂದುವಾಗಿ ಬಳಸಿಕೊಂಡು, ಬ್ರಿಟೀಷರಿಗೆ ಭಾರತೀಯರ ಏಕತೆಯ ಬಿಸಿಯನ್ನು ಮುಟ್ಟಿಸಿದ ಬಗ್ಗೆ ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯಲ್ಲಿ ಜರಗಿದ ವಿದ್ಯಾಗಣಪತಿ ಮಹೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಮಾಜ ಸೇವಕರಾದ ಪವನ್‌ರವರು ಸುಂದರವಾಗಿ ವರ್ಣಿಸಿದರು.
ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ ಗೌರಿ ಟಿ., ಸಂಸ್ಕೃತ ಉಪನ್ಯಾಸಕರು, ವಿಷ್ಣುಗುಪ್ತ ವಿದ್ಯಾಲಯ, ಗೋಕರ್ಣ ವೇದದ ಮಹತ್ವ ಹಾಗೂ ಭಾರತೀಯ ಶಿಕ್ಷಣ ಪದ್ಧತಿ, ವೇದಗಳೊಂದಿಗಿನ ಅನುಬಂಧ, ಆಹಾರ ಪದ್ಧತಿ, ಆಚರಣೆ ಇದು ವಿದ್ಯಾರ್ಥಿಗಳನ್ನು ಸಂಸ್ಕಾರಯುತರನ್ನಾಗಿ ಮಾಡುತ್ತದೆ. ಬೇಡಿಕೆ ಮತ್ತು ಪ್ರಯತ್ನ ಎಂದರೆ ಪ್ರಾರ್ಥನೆ. ಇದರಿಂದ ವಿದ್ಯಾರ್ಥಿ ತನ್ನ ಜೀವನದಲ್ಲಿ ಯಶಸ್ಸನ್ನು ಕಾಣಬಲ್ಲರು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜನಾರ್ದನ ಶೆಟ್ಟಿ, ಸದಸ್ಯರು, ಆಡಳಿತ ಮಂಡಳಿ, ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಅಳಿಕೆ ವಹಿಸಿದ್ದರು. ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಕೆ.ಯಸ್. ಕೃಷ್ಣ ಭಟ್ ಹಾಗೂ ಕಾರ್ಯದರ್ಶಿ ಮತ್ತು ಸಂಚಾಲಕರಾದ ಚಂದ್ರಶೇಖರ ಭಟ್ ಯಸ್., ಆಡಳಿತಾಧಿಕಾರಿ ಜನಾರ್ಧನ ನಾಯಕ್ ಯಸ್. ಉಪಸ್ಥಿತರಿದ್ದರು. ಅನಂತ ಪ್ರಸಾದ್ ಬಿ. ಗಣಿತಶಾಸ್ತç ಉಪನ್ಯಾಸಕರು, ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ ಸ್ವಾಗತಿಸಿ, ಶೈಲಜಾ ಕೆ., ಆಂಗ್ಲ ಭಾಷಾ ಉಪನ್ಯಾಸಕರು, ಪದವಿ ಪೂರ್ವ ಕಾಲೇಜು, ಅಳಿಕೆ ವಂದಿಸಿದರು. ಅಶೋಕ್ ಕುಮಾರ್ ಎ., ಅಧ್ಯಾಪಕರು, ಪ್ರೌಢಶಾಲೆ, ಅಳಿಕೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಭೂಮಿತ್ ಓಝ, ಅನುರಾಗ್ ಯಂ. ಮೌಲ್ಯಯುತವಾದ ಕಥೆಗಳ ಮೂಲಕ ಗಣಪತಿಯನ್ನು ವರ್ಣಿಸಿದರು. ಪ್ರಸಿದ್ಧ್ ರೈ ಮತ್ತು ನಂದನ್ ಹೆಬ್ಬಾರ್ ಹಾಡನ್ನು ಹಾಡಿದರು.