21-9-2023 ಬೆಳಿಗ್ಗೆ ಸಭಾ ಕಾರ್ಯಕ್ರಮ
ಓಂ ಶ್ರೀ ಸಾಯಿರಾಮ್
ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಗಳು, ಅಳಿಕೆ
ಶ್ರೀ ವಿದ್ಯಾಗಣಪತಿ ಮಹೋತ್ಸವ
ದಿನಾಂಕ : 21-09-2023 ಗುರುವಾರ
ಸಮಯ : ಪೂರ್ವಾಹ್ನ 10:30ರಿಂದ
ಸಭಾ ಕಾರ್ಯಕ್ರಮ
ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಗಳು ಉನ್ನತವಾಗಿವೆ. ಬಾಲ ವಿಕಾಸ ಪಠ್ಯಕ್ರಮದಿಂದ ಅದು ಸಾಧ್ಯವಾಗಿದೆ. ಕಳೆದ ಮೂರು ರ‍್ಷಗಳಲ್ಲಿ ರ‍್ನಾಟಕದಾದ್ಯಂತ ನಾಲ್ಕು ನೂರಕ್ಕೂ ಹೆಚ್ಚು ಹೊಸ ಬಾಲ ವಿಕಾಸ ಕೇಂದ್ರಗಳನ್ನು ತೆರೆಯುವುದರ ಮೂಲಕ ಉತ್ತಮ ನಾಗರಿಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದೆ ಎಂದು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷರಾದ ಪದ್ಮನಾಭ ಪೈ ಯವರು ಶ್ರೀ ವಿದ್ಯಾ ಗಣಪತಿ ಮಹೋತ್ಸವದ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಗಣಪತಿ ಎಂದರೆ ಸ್ಪರ‍್ತಿ. ಅಜ್ಞಾನವನ್ನು, ದರ‍್ನಡತೆಯನ್ನು ಮತ್ತು ಅಹಂಕಾರವನ್ನು ದೂರ ಮಾಡಿ ನಮ್ಮನ್ನು ಸಲಹುವ ಕಾರಣದಿಂದಲೇ ಗಣೇಶ ಪ್ರಥಮ ವಂದಿತ ಎಂದು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ರ‍್ನಾಟಕ ಇದರ ಮಹಿಳಾ ಸಂಯೋಜಕಾಗಿರುವ ಪ್ರಿಯಾ ಪದ್ಮನಾಭ ಪೈ ಎಂ. ಹೇಳಿದರು.
ದೇವರಲ್ಲಿ ನಂಬಿಕೆ ಬಹಳ ಮುಖ್ಯ. ಆ ನಂಬಿಕೆ ಭಯ, ಭಕ್ತಿ ಮತ್ತು ಶರಣಾಗತಿ ಅದು ನಮ್ಮ ಜೀವನವನ್ನು ಉತ್ತುಂಗಕ್ಕೆಏರಿಸುತ್ತದೆ. ಪ್ರೀತಿ ಮತ್ತು ವಿಶ್ವಾಸ ಜೀವನದಲ್ಲಿ ಬಹಳ ಮುಖ್ಯ ಎಂದು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಪ್ರಸನ್ನ ಭಟ್ ಅಭಿಪ್ರಾಯಪಟ್ಟರು.
ಭಾರತೀಯ ಸನಾತನ ಸಂಸ್ಕೃತಿ ಮತ್ತು ಪರಂಪರೆಯ ಜೊತೆಗೆ ಮಕ್ಕಳಿಗೆ ಆಧ್ಯಾತ್ಮಿಕ ಚಿಂತನೆಗಳನ್ನು ಕೊಡುವ ಹಬ್ಬ ಎಂದರೆ ಅದು ಗಣೇಶೋತ್ಸವ ಎಂದು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಕಾಸರಗೋಡು ಜಿಲ್ಲಾಧ್ಯಕ್ಷರಾದ ಶ್ರೀ ಮಹಾಲಿಂಗ ಭಟ್ ವಿದ್ಯರ‍್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯರ‍್ಥಿಗಳಾದ ಶೋಭಿತ ಸಿ.ಹೆಚ್. ಮತ್ತು ದೀಪಶ್ರೀ ಇವರು ಮೂಶಿಕವಾಹನನ ಮಹಿಮೆಯ ಕುರಿತು ಮಾತನಾಡಿ, ಶೋಭಿತ ಸಿ.ಹೆಚ್. ಮತ್ತು ಬಳಗ ಹಾಗೂ ಮಾ ಶಾಂತಿಮೂಲೆ ಹಾಡಿದರು. ಕರ‍್ಯಕ್ರಮದಲ್ಲಿ ಕೆ. ಎಸ್. ಕೃಷ್ಣ ಭಟ್ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಅಳಿಕೆ ಉಪಸ್ಥಿತರಿದ್ದರು. ಎಸ್ ಚಂದ್ರಶೇಖರ್ ಭಟ್ ಕರ‍್ಯರ‍್ಶಿಗಳು, ಸಂಚಾಲಕರು ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಗಳು ಅಳಿಕೆ ಸ್ವಾಗತಿಸಿ, ಸೌಮ್ಯ ಪ್ರೌಢಶಾಲಾ ಶಿಕ್ಷಕಿ ವಂದಿಸಿದರು. ರಾಜೇಂದ್ರ ರೈ ಹಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕರು ಅಳಿಕೆ ಕರ‍್ಯಕ್ರಮವನ್ನು ನಿರೂಪಿಸಿದರು.