ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಅಳಿಕೆ ಯಲ್ಲಿ ದಿನಾಂಕ 22-08-2023 ರಂದು ಪೂರ್ವಹ್ನ 6.00 ರಿಂದ ಅಪರಾಹ್ನ 7 ಗಂಟೆಯ ವರೆಗೆ ವಾರ್ಷಿಕ ಶ್ರಮಸೇವೆ
ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಅಳಿಕೆ ಯಲ್ಲಿ ದಿನಾಂಕ 22-08-2023 ರಂದು ಪೂರ್ವಹ್ನ 6.00 ರಿಂದ ಅಪರಾಹ್ನ 7 ಗಂಟೆಯ ವರೆಗೆ ವಾರ್ಷಿಕ ಶ್ರಮಸೇವೆ “ಸಾಯಿ ಗಂಗಾ 2023-24” ಸುಮಾರು 550 ಮಕ್ಕಳು ಮತ್ತು 35 ಶಿಕ್ಷಕರನ್ನೊಳಗೊಂಡು ಸಂಪನ್ನಗೊಂಡಿತು. ಈ ವರ್ಷದ ವಿನೂತನ ಕಾರ್ಯಕ್ರಮ “ಸಾಯಿ ಮಿಯವಾಕಿ” ಕಾಡುಗಳನ್ನು ಬೆಳೆಸುವುದಾಗಿತ್ತು. ಜಪಾನಿನ ಸಸ್ಯಶಾಸ್ತ್ರಜ್ಞ ಆಖಿರ್ ಮಿಯವಾಕಿ ಕಂಡುಹಿಡಿದ ಈ ವಿಶೇಷ ರೀತಿಯ ಗಿಡ ಬೆಳೆಸುವ ಪದ್ಧತಿಯಲ್ಲಿ ಗಿಡಗಳು ಹತ್ತು ಪಟ್ಟು ವೇಗವಾಗಿ, ಮೂವತ್ತು ಪಟ್ಟು ದಟ್ಟವಾಗಿ ಬೆಳೆದು ಬೇರೆ ಕಾಡುಗಳಿಗೆ ಹೊಲಿಸಿದರೆ ನೂರು ಪಟ್ಟು ಜೀವವೈವಿಧ್ಯದಿಂದ ಕೂಡಿರುತ್ತದೆ. ಈ ಕಾರ್ಯಕ್ರಮವು ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಡಾ| ಜೆಡ್ಡು ಗನಪತಿ ಭಟ್ ಮತ್ತು ಅಳಿಕೆ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಜರಗಿತು.