SRI SATHYA SAI LOKA SEVA TRUST, ALIKE

Alike Educational Institutions

+91 8255 239 236 , 238 736

ಅಳಿಕೆಯಲ್ಲಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಭೂಮಿ ಪೂಜೆ

ಅಳಿಕೆಯಲ್ಲಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಭೂಮಿ ಪೂಜೆ

ವಿಜಯದಶಮಿಯ ಶುಭ ದಿನ  (24.10.2023 ಮಂಗಳವಾರ)  ಬೆಳಗ್ಗೆ 10.10ರ  ಶುಭ  ಮುಹೂರ್ತದಲ್ಲಿ ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟ್ ನ ಆಶ್ರಯದಲ್ಲಿ,  ವಿದ್ಯಾಸಂಸ್ಥೆಗಳ  ಮುಖ್ಯ ದ್ವಾರದ  ಬಳಿ  ಸಂಸ್ಥೆಗಳ ಮ್ಯಾನೇಂಜಿಗ್ ಟ್ರಸ್ಟಿ ಕೆ.ಎಸ್ ಕೃಷ್ಣ ಭಟ್ ನೇತೃತ್ವದಲ್ಲಿ ಪ್ರೌಢಶಾಲಾ ವಿಭಾಗದ ನಿವೃತ್ತ ಮುಖ್ಯೋಪಾಧ್ಯಾಯನಿ ಕೆ.ವಿ ವೆಂಕಟಲಕ್ಷ್ಮಿ ಅಮ್ಮನವರ ದಿವ್ಯ ಹಸ್ತದಿಂದ ನೂತನ ವಿದ್ಯಾರ್ಥಿನಿಯರ ಪದವಿಪೂರ್ವ ಕಾಲೇಜಿಗೆ ಭೂಮಿ ಪೂಜೆ ಹಾಗೂ ಶಂಕು ಸ್ಥಾಪನೆ ಕಾರ್ಯಕ್ರಮ ನಡೆಯಿತು. ಸಂಸ್ಥೆಗಳ ಕಾರ್ಯದರ್ಶಿ ಮತ್ತು ಸಂಚಾಲಕರಾದ ಎಸ್ ಚಂದ್ರಶೇಖರ ಭಟ್, ಆಡಳಿತಾಧಿಕಾರಿ ಎಸ್ ಜನಾರ್ದನ ನಾಯಕ್, ಆಡಳಿತ ಮಂಡಳಿ ಸದಸ್ಯ ಡಾ. ವಿಕ್ರಮ್ ಶೆಟ್ಟಿ,  ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು,  ಪಂಚಾಯತ್ ಸದಸ್ಯರು, ಅಳಿಕೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಕಾನ ಈಶ್ವರ ಭಟ್, ಅಳಿಕೆ ಸೊಸೈಟಿಯ ನಿರ್ದೇಶಕರುಗಳಾದ ರೂಪೇಶ್‌ ರೈ, ಅಳಿಕೆಗುತ್ತು, ಮಹೇಶ್‌ ಅಳಿಕೆ, ಅಳಿಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಚಿನ್ನಪ್ಪ ಗೌಡ, ಯೋಗ ಶಿಕ್ಷಕರಾದ ಕೆ. ಆನಂದ ಶೆಟ್ಟಿ, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸದಸ್ಯರು, ಹಿರಿಯ ವಿದ್ಯಾರ್ಥಿ ಮುಖಂಡರಾದ ಡಾII ಸುರೇಶ್, ಡಾII ಶ್ರೀಪಾದ ಮೆಹಂದಲೆ, ಡಾII ನರೇಶ್ ರೈ, ಕಟ್ಟಡದ ಮುಖ್ಯ ಇಂಜನಿಯರ್ ಅರ್ಜುನ್ ಕೆ.ಪೂಂಜಾ, ಊರಿನ ಮಹನೀಯರು, ಮಾತೆಯರು, ಹಿರಿಯ ವಿದ್ಯಾರ್ಥಿಗಳು, ಸಂಸ್ಥೆಯ ಎಲ್ಲಾ ವಿಭಾಗಗಳ ಮುಖ್ಯಸ್ಥರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ವೇದಮೂರ್ತಿ ಉದಯಶಂಕರ ಭಟ್ ವೈದಿಕ ಕಾರ್ಯಕ್ರಮ ನಡೆಸಿಕೊಟ್ಟರು.