ಪ್ರತಿಭಾ ಪುರಸ್ಕಾರ ಹಾಗೂ ಶಾಲಾ ವಾರ್ಷಿಕೋತ್ಸವ
ಓಂ ಶ್ರೀ ಸಾಯಿ ರಾಮ್
ಶ್ರೀ ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆ, ಅಳಿಕೆ
ಪ್ರತಿಭಾ ಪುರಸ್ಕಾರ ಹಾಗೂ ಶಾಲಾ ವಾರ್ಷಿಕೋತ್ಸವ
ದಿನಾಂಕ 23-12-2023 ಶನಿವಾರದಂದು ಶ್ರೀ ಸತ್ಯಸಾಯಿ ಲೋಕಸೇವಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ವಾಣಿವಿಹಾರ, ಅಳಿಕೆ ಇದರ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕೋತ್ಸವ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ನ ಕಾರ್ಯದರ್ಶಿ ಯಸ್. ಚಂದ್ರಶೇಖರ ಭಟ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ದೀಪ ಬೆಳಗಿಸುವುದರೊಂದಿಗೆ ಗಣ್ಯರು ಉದ್ಘಾಟನೆಗೈದರು. ಮುಖ್ಯ ಅತಿಥಿಗಳಾಗಿ ಪದ್ಮನಾಭ ಪೂಜಾರಿ ಸಣ್ಣಗುತ್ತು ಅಧ್ಯಕ್ಷರು, ಗ್ರಾಮ ಪಂಚಾಯತ್, ಅಳಿಕೆ, ಡಾ. ನರೇಶ್ ರೈ ತಜ್ಞರು, ತೀವ್ರ ನಿಗಾ ಘಟಕ ವಿಭಾಗ, ಕೆ.ಎಸ್. ಹೆಗಡೆ ಆಸ್ಪತ್ರೆ, ದೇರಳಕಟ್ಟೆ, ಮಹೇಶ್ ಅಳಿಕೆ, ನ್ಯಾಯವಾದಿಗಳು, ಮಂಗಳೂರು, ಕೆ. ಚಂದ್ರಶೇಖರ, ಸಮೂಹ ಸಂಪನ್ಮೂಲ ವ್ಯಕ್ತಿ, ಕನ್ಯಾನ, ಜನಾರ್ದನ ನಾಯಕ್ ಯಸ್. ಆಡಳಿತಾಧಿಕಾರಿಗಳು, ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳು, ಅಳಿಕೆ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ನರೇಶ್ ರೈ ಯವರು 40 ವರ್ಷಗಳ ಹಿಂದೆ ಅಳಿಕೆ ವಿದ್ಯಾಸಂಸ್ಥೆಯಲ್ಲಿ ಕಲಿತ ಅನುಭವ ಹಾಗೂ ವಾತಾವರಣ ನೆನಪಿಸಿಕೊಳ್ಳುತ್ತಾ ಇಲ್ಲಿಯ ಶಿಸ್ತುಬದ್ಧ ಜೀವನ ಕ್ರಮ, ಬೆಳಗಿನ ಪ್ರಾರ್ಥನೆ, ಶುಚಿತ್ವ ಇತ್ಯಾದಿಗಳು ನನಗೆ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟದಲ್ಲಿರುವ ರೋಗಿಗಳನ್ನು ನೋಡಿಕೊಳ್ಳಲು ಮತ್ತು ಈ ಪುಣ್ಯದ ಕಾರ್ಯವನ್ನು ಮಾಡಲು ಧೈರ್ಯ ತುಂಬುವುದು ಎಂದು ಹೇಳಿದರು.
ಪಾಲ್ಗೊಂಡ ಎಲ್ಲಾ ಅತಿಥಿಗಳು ಮಕ್ಕಳಿಗೆ ಬಹುಮಾನ ವಿತರಿಸಿ ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಿರ್ಷಿತಾ ಕಾರಂತ್ 6ನೇ ತರಗತಿ ಇವಳನ್ನು ಸನ್ಮಾನಿಸಿ ಶುಭ ಹಾರೈಸಲಾಯಿತು. ಕಾರ್ಯಕ್ರಮದ ಮೊದಲಿಗೆ ಶಾಲಾ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ, ಮುಖ್ಯ ಶಿಕ್ಷಕ ಈಶ್ವರ ನಾಯ್ಕ್ ಯಸ್. ಇವರು ಪ್ರಾಸ್ತಾವಿಕ ಸ್ವಾಗತ ಹಾಗೂ ವರದಿ ವಾಚನ ಮಾಡಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೇಂದ್ರ ರೈ ಧನ್ಯವಾದಗೈದರು. ತರಗತಿ ಶಿಕ್ಷಕ ಶಿಕ್ಷಕಿಯರು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶಿಕ್ಷಕ ಪ್ರವೀಣ್ ಶೆಟ್ಟಿ ನಿರೂಪಿಸಿದರು. ಎಲ್ಲಾ ಪೋಷಕರು, ವಿದ್ಯಾಭಿಮಾನಿಗಳು ಹಾಗೂ ಶಾಲಾಭಿವೃದ್ಧಿ ಸಮಿತಿಯವರ ಸಹಕಾರ ಮತ್ತು ಉಪಸ್ಥಿತಿಯಲ್ಲಿ ನಡೆದ ಸಭಾ ಕಾರ್ಯಕ್ರಮ ಮತ್ತು ಮಕ್ಕಳಿಂದ ವಿವಿಧ ವಿನೋದಾವಳಿಗಳು ರಾಷ್ಟçಗೀತೆಯೊಂದಿಗೆ ಸಂಪನ್ನಗೊಡಿತು.