108 ಕಾಯಿ ಗಣಹೋಮ ಮತ್ತು ವಾರ್ಷಿಕ ಸತ್ಯಸಾಯಿ ಪೂಜೆ
ಓಂ ಶ್ರೀ ಸಾಯಿರಾಮ್
ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳು, ಅಳಿಕೆ
108 ಕಾಯಿ ಗಣಹೋಮ ಮತ್ತು ವಾರ್ಷಿಕ ಸತ್ಯಸಾಯಿ ಪೂಜೆ
ದಿನಾಂಕ : 06-03-2022
ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳು, ಅಳಿಕೆ ಇಲ್ಲಿ ದಿನಾಂಕ 06-03-2022ನೇ ಭಾನುವಾರ ವೇದಮೂರ್ತಿ ಶ್ರೀ ಮಂಜಳಗಿರಿ ಉದನೇಶ್ವರ ಭಟ್ಟರ ನೇತೃತ್ವದಲ್ಲಿಹಿರಿಯತ್ಯಾಗಜೀವಿ ಶ್ರೀ ಮಧುಸೂದನ ಭಟ್ರವರ ಉಪಸ್ಥಿತಿಯಲ್ಲಿ 11 ಜನಋತ್ವಿಜರ ಸಹಕಾರದೊಂದಿಗೆ 108 ಅಷ್ಟೋತ್ತರ ಶತ ನಾರಿಕೇಳ ಗಣಹವನಕಾರ್ಯಕ್ರಮ ಮತ್ತುಉದಯಶಂಕರ ಭಟ್ಟರ ನೇತೃತ್ವದಲ್ಲಿವಾರ್ಷಿಕ ಸತ್ಯಸಾಯಿ ಪೂಜೆಜರಗಿತು. ಈ ಶುಭ ಸಂದರ್ಭದಲ್ಲಿ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಸ್. ಕೃಷ್ಣ ಭಟ್ ಹಾಗೂ ಗದಗಿನಖ್ಯಾತ ವೈದ್ಯಡಾ|ರಾಮಕೃಷ್ಣವೈದ್ಯರವರು ವಿದ್ಯಾರ್ಥಿಗಳ ವಾರ್ಷಿಕ ಸಂಚಿಕೆ‘ಸತ್ಯಜ್ಯೋತಿ’ಯನ್ನು ಬಿಡುಗಡೆಗೊಳಿಸಿದರು.ಕಾರ್ಯಕ್ರಮದ ಪುರೋಹಿತರಾದ ವೇದಮೂರ್ತಿ ಪರಕ್ಕಜೆಅನಂತನಾರಾಯಣ ಭಟ್ರವರುಜ್ಞಾನಾರ್ಜನೆ ಮಾಡುವಕಾಯಕ ನಿರ್ವಿಘ್ನವಾಗಿ ನಡೆದುಜೀವನದಲ್ಲಿ ಸಫಲತೆಯನ್ನುಕಾಣಬೇಕಾದರೆ ಶ್ರೀ ದೇವರ ದಿವ್ಯಕೃಪಾಶೀವಾದ ಬಹು ಮುಖ್ಯ.ಅದರಲ್ಲೂ ಪ್ರಥಮ ಪೂಜಿತಗಣೇಶನಅನುಗ್ರಹ ಬೇಕು ಎಂದು ಹೇಳುತ್ತಾ ಗಣಪತಿ ಹವನ ಮಾಡುವುದರ ಪ್ರಾಮುಖ್ಯತೆ ಬಗ್ಗೆ ವಿದ್ವತ್ಪೂರ್ಣ ಮಾತುಗಳನ್ನಾಡಿ ಆಶೀರ್ವದಿಸಿದರು.ಸಂಸ್ಥೆಯ ಆಡಳಿತ ಮಂಡಳಿ ಕಾರ್ಯದರ್ಶಿ ಹಾಗೂ ವಿದ್ಯಾಸಂಸ್ಥೆಗಳ ಸಂಚಾಲಕರಾದಎಸ್. ಚಂದ್ರಶೇಖರ ಭಟ್ಗಣಹೋಮ ಹಾಗೂ ಸತ್ಯಸಾಯಿ ಪೂಜೆಯ ಮಹತ್ವದ ಬಗ್ಗೆ ಮಾತನಾಡಿ, ಎಲ್ಲರನ್ನು ವಂದಿಸಿದರು.ಆಡಳಿತಾಧಿಕಾರಿ ಎಸ್. ಜನಾರ್ದನ ನಾಯಕ್, ಸಂಸ್ಥೆಯತ್ಯಾಗಜೀವಿ ಹಿರಿಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ನಿಲಯ ಪಾಲಕರು, ಸಂಸ್ಥೆಯ ಹಿತೈಷಿ ಬಂಧುಗಳು, ಅಧ್ಯಾಪಕರು, ಅತಿಥಿಗಳು, ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರುಕಾರ್ಯಕ್ರಮದಲ್ಲಿ ಭಾಗವಹಿಸಿದರು.ಪಿಯುಸಿ ಹಾಸ್ಟೆಲ್ ವಾರ್ಡನ್ಅಶೋಕ್ ಭಟ್ಕಾರ್ಯಕ್ರಮ ಸಂಯೋಜಿಸಿದರು.