ವಿದ್ಯಾಗಣಪತಿ ಮಹೋತ್ಸವದ ಮೂರನೇ ದಿನದ ಸಭಾ ಕಾರ್ಯಕ್ರಮ
ನಾವು ತಂದೆ ತಾಯಿಗಳ ತ್ಯಾಗವನ್ನು ತಿಳಿದುಕೊಳ್ಳಬೇಕು. ಇಂದಿನ ಆರ್ಥಿಕ ವ್ಯವಸ್ಥೆಯಿಂದ ನಾವು ಸ್ವಾರ್ಥಿಗಳಾಗುತ್ತಿದ್ದೇವೆ. ಆದರೆ ಅಳಿಕೆಯ ತ್ಯಾಗಜೀವಿಗಳ ನಡುವೆ ಬೆಳೆಯುವ ನೀವು ನಿಜವಾಗಿಯೂ ಧನ್ಯರು. ಎಲ್ಲಾ ದುರ್ಮಾರ್ಗಗಳನ್ನು ದೂರ ಮಾಡುವ ಗಣಪತಿಯು ಎಲ್ಲಾ ಸದ್ಗುಣಗಳ ಸಾಕಾರ ಮೂರ್ತಿಯಾಗಿದ್ದಾನೆ ಎಂದು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯ ವಿದ್ಯಾಗಣಪತಿ ಮಹೋತ್ಸವದ ಮೂರನೇ ದಿನ ದಿನಾಂಕ 19-09-2015 ಶನಿವಾರದ, ಪೂರ್ವಾಹ್ನ 10:30ರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶೃಂಗೇರಿಯ ಜೆ.ಸಿ.ಬಿ.ಎಂ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿ.ವಿ. ಗಿರಿಧರ ಶಾಸ್ತ್ರಿಯವರು ಹೇಳಿದರು. ತ್ಯಾಗಜೀವಿಗಳು ಕಂಡು ಕೊಂಡ ಸನ್ಮಾರ್ಗದಲ್ಲಿ ನಡೆದರೆ ನಾವೆಲ್ಲರೂ ಉತ್ತಮರಾಗಬಹುದು ಎಂದು ಅಳಿಕೆ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಯಸ್. ಪದ್ಮನಾಭ ಪೂಜಾರಿಯವರು ಹೇಳಿದರು. ಗಣಪತಿಯ ಕುರಿತಾಗಿ ವಿದ್ಯಾರ್ಥಿನಿಯರಾದ ಸಿಂಧೂರ ಮಾತನಾಡಿ, ಪವಿತ್ರ ವಿ. ಹಾಡಿದರು. ಸಭೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಯಂ. ಈಶ್ವರ ಭಟ್, ಕೆ.ಎಸ್. ಕೃಷ್ಣ ಭಟ್ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ರಘು ಟಿ.ವೈ. ಸ್ವಾಗತಿಸಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಈಶ್ವರ ನಾಯ್ಕ್ ವಂದಿಸಿದರು. ಶಿಕ್ಷಕರಾದ ಗುರುಪ್ರಸಾದ್ ನಿರೂಪಿಸಿದರು.