SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

75th Indian Independence Day Celebration 2022

ಭವಿಷ್ಯದ ಭಾರತ ಉತ್ತಮವಾಗಿ ಇರಬೇಕಾದರೆ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಪಣತೊಡಬೇಕು. ಅತ್ಯುತ್ತಮ ಅಧಿಕಾರಿಗಳು ನಿರ್ಮಾಣವಾಗಬೇಕು. ಉತ್ತಮ ಗುಣಮಟ್ಟದ ಮತ್ತು ಪ್ರಪಂಚಕ್ಕೆ ಅತಿ ಅಗತ್ಯವಾಗಿ ಬೇಕಾದ ಅನೇಕ ವಸ್ತುಗಳನ್ನು ಜಗತ್ತಿಗೆ ಮಾರಾಟ ಮಾಡಲು ವಿದ್ಯಾರ್ಥಿಗಳು ಈಗಿನಿಂದಲೇ ತೊಡಗಿಸಿಕೊಳ್ಳಬೇಕು ಎಂದು ಐ.ಎಂ.ಎ. – ಕೆ.ಎಸ್.ಬಿ. ಡಾಕ್ಟರ್ಸ್ ಡೇ ಪ್ರಶಸ್ತಿಗೆ ಭಾಜನರಾಗಿರುವ ಡಾ| ಎಂ.ಕೆ. ಪ್ರಸಾದ್ ಇವರು 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಂದು ಅಳಿಕೆ ವಿದ್ಯಾಸಂಸ್ಥೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಭಾರತವು ಒಂದು ಸುಸಂಸ್ಕೃತ ಸಂಪದ್ಭರಿತ ರಾಷ್ಟ್ರವಾದ ಕಾರಣ ವ್ಯಾಪಾರಕ್ಕೆಂದು ಬಂದ ವಿದೇಶಿಯರು ಇಲ್ಲಿನ ಸಂಪತ್ತನ್ನು ಕೊಳ್ಳೆ ಹೊಡೆದರು. ದೇಶವನ್ನು ಒಡೆದರು. ಅನೇಕರ ತ್ಯಾಗ ಮತ್ತು ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ಸ್ವಾತಂತ್ರ್ಯಕ್ಕೆ 75 ವರ್ಷ ತುಂಬಿದ ಈ ಸಂದರ್ಭದಲ್ಲಿ ಧನಾತ್ಮಕ ವಿಷಯಗಳನ್ನು ಅವಲೋಕಿಸಿ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಕ್ಷೇತ್ರದಲ್ಲಿ ಶಕ್ತಿ ಮೀರಿ ದುಡಿದರೆ ದೇಶವು ರಾಮರಾಜ್ಯವಾಗುವುದು ಎಂದು ಸಮಾರಂಭದ ಮುಖ್ಯ ಅತಿಥಿ ಡಾ| ಎ.ಕೆ. ರೈ, ಖ್ಯಾತ ಜನರಲ್ ಸರ್ಜನ್ ಪುತ್ತೂರು ಇವರು ಹೇಳಿದರು. ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಸ್. ಕೃಷ್ಣ ಭಟ್ ನೂತನ ಧ್ವಜಸ್ತಂಭದ ಉದ್ಘಾಟನೆ ಮತ್ತು ಧ್ವಜಾರೋಹಣ ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಅಳಿಕೆ ಶ್ರೀ ಸತ್ಯಸಾಯಿ ಜನರಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಶಂಕರ ಭಟ್ ವಹಿಸಿದ್ದರು. ಪಿಯುಸಿ ವಾರ್ಡನ್ ಅಶೋಕ ಭಟ್ ಸ್ವಾಗತಿಸಿ, ವಿದ್ಯಾಕೇಂದ್ರ ಪ್ರಾಂಶುಪಾಲರಾದ ಯಂ. ಶಿವಕುಮಾರ್ ವಂದಿಸಿದರು. ಕಾಲೇಜು ಉಪನ್ಯಾಸಕಿಯಾದ ಅಮೃತ ಯಂ. ನಿರೂಪಿಸಿದರು. ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟಿನ ಕಾರ್ಯದರ್ಶಿ ಚಂದ್ರಶೇಖರ ಭಟ್ ಯಸ್ ಉಪಸ್ಥಿತರಿದ್ದರು.
ವಿದ್ಯಾಕೇಂದ್ರದ ವಿದ್ಯಾರ್ಥಿಗಳಾದ ಪ್ರೇಮ್ ಸಾಗರ್, ತೇಜಸ್ ಬೆಂಕಿ, ಪಿಯುಸಿ ವಿದ್ಯಾರ್ಥಿಗಳಾದ ಮೋನಿಷ್ ವಿ. ಮತ್ತು ಚಂದನ್ ಎಲ್.ಎಸ್. ಭಾಷಣ ಮಾಡಿದರು.

ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.