ಜೀವಶಾಸ್ತ್ರ ಪ್ರಯೋಗಾಲಯ ನವೀಕೃತ ಕೊಠಡಿ ಉದ್ಘಾಟನೆ
ದಿನಾಂಕ 26-06-2014 ಗುರುವಾರ ಅಳಿಕೆ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಪ್ರಯೋಗಾಲಯದ ನವೀಕೃತ ಕೊಠಡಿಯನ್ನು ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್ ಉದ್ಘಾಟಿಸಿ, ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಈ ಪ್ರಯೋಗಾಲಯ ಪೂರಕವಾಗಲಿ ಎಂದು ಹಾರೈಸಿದರು. ಮುಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಸಂಶೋಧನೆ ದೃಷ್ಟಿಯಿಂದ ಹೆಚ್ಚುವರಿ ಅಧ್ಯಯನಕ್ಕೆ ಈ ಪ್ರಯೋಗಾಲಯ ಅನುಕೂಲಕರವಾಗಲಿ ಎಂದು ಸಂಸ್ಥೆಯ ಸಂಚಾಲಕರಾದ ಯಂ. ಈಶ್ವರ ಭಟ್ ತಿಳಿಸಿದರು. ರೆಕ್ಟರ್ ಕೃಷ್ಣ ಭಟ್, ಪ್ರಾಂಶುಪಾಲ ಪ್ರಕಾಶ್ ವಿ. ದೈವಜ್ಞ ಸ್ವಾಗತಿಸಿ ಜೀವಶಾಸ್ತ್ರ ಉಪನ್ಯಾಸಕರಾದ ಡಾ| ಸಿದ್ದರಾಜು ನಿರೂಪಿಸಿ, ವಂದಿಸಿದರು.