ರಕ್ತದಾನ ಶಿಬಿರ
ದಿನಾಂಕ: 29-11-2018 ಗುರುವಾರ
ಐ.ಎಂ.ಎ. ಮತ್ತು ಎ.ಎಂ.ಸಿ., ಮಂಗಳೂರು, ಲಯನ್ಸ್ ಕ್ಲಬ್ ವಿಟ್ಲ, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ, ದೇರಳಕಟ್ಟೆ ಮತ್ತು ಅಳಿಕೆಯ ಹಿರಿಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಮಡಿಯಾಲ ಶ್ರೀ ನಾರಾಯಣ ಭಟ್ಟರ ಹುಟ್ಟುಹಬ್ಬದ ಪ್ರಯುಕ್ತ ಅಳಿಕೆಯಲ್ಲಿ ರಕ್ತದಾನ ಶಿಬಿರ
ರಕ್ತದಾನ, ಮತ್ತು ಅಂಗಾಂಗ ದಾನಗಳನ್ನು ಮಾಡುವುದರಿಂದ ಒಬ್ಬ ವ್ಯಕ್ತಿಗೆ 8 ಜೀವ ಉಳಿಸುವ ಸಾಧ್ಯತೆಯಿದೆ. ಈ ಬಗ್ಗೆ ಮಾಹಿತಿಯ ಅವಶ್ಯಕತೆಯಿದೆ ಎಂದು ಅನಾಟಾಮಿ ವಿಭಾಗದ ಪ್ರೊಫೆಸರ್ ಡಾ. ವಿನಯ್ ಕುಮಾರ್ ಅಭಿಪ್ರಾಯ ಪಟ್ಟರು. ಮಡಿಯಾಲ ನಾರಾಯಣ ಭಟ್ಟರ ಹುಟ್ಟುಹಬ್ಬವನ್ನು ರಕ್ತದಾನ ಶಿಬಿರದ ಮೂಲಕ ಆಚರಿಸುತ್ತಿರುವುದು ಅಳಿಕೆಯ ಹಿರಿಯ ವಿದ್ಯಾರ್ಥಿ ಮತ್ತು ಐ.ಎಂ.ಎ. ಮಂಗಳೂರು ವಿಭಾಗದ ಅಧ್ಯಕ್ಷರಾದ ಡಾ. ಸಚ್ಚಿದಾನಂದ ರೈ ಶ್ಲಾಘಿಸಿದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಕಾರ್ಯಕರ್ತರು ಸೇರಿ 50 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿದರು. ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಲಯನ್ಸ್ ಕ್ಲಬ್ನ ಅಧ್ಯಕ್ಷರಾದ ಲ| ಜಯಾ ವಿ. ರೈ, ಕಾರ್ಯದರ್ಶಿ ಚಂದ್ರಶೇಖರ ಭಟ್ ಯಸ್., ಸಂಚಾಲಕರಾದ ಕೆ.ಎಸ್. ಕೃಷ್ಣ ಭಟ್ ಉಪಸ್ಥಿತರಿದ್ದರು. ಪಿಯುಸಿ ವಾರ್ಡನ್ ಅಶೋಕ್ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಸಿದರು. ಡಾ. ಸಿದ್ದರಾಜು ಯಂ. ಮಾಹಿತಿ ನೀಡಿ ವಂದಿಸಿದರು.