SRI SATHYA SAI LOKA SEVA TRUST, ALIKE

Alike Educational Institutions

+918255 298 236 | 239 236

(ಸಿಬಿಎಸ್ಇ) ಏಪ್ರಿಲ್- ಮೇ 2022 ರಲ್ಲಿ ರಲ್ಲಿ ನಡೆಸಿದ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಫಲಿತಾಂಶ

ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರ, ಅಳಿಕೆ. ಕೇಂದ್ರೀಯ ಶಿಕ್ಷಣ ಮಂಡಳಿ, ದೆಹಲಿ (ಸಿಬಿಎಸ್ಇ) ಏಪ್ರಿಲ್- ಮೇ 2022 ರಲ್ಲಿ ರಲ್ಲಿ ನಡೆಸಿದ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರ, ಅಳಿಕೆಯಲ್ಲಿ ಪರೀಕ್ಷೆ ಬರೆದ ಎಲ್ಲಾ 120 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ 100% ಫಲಿತಾಂಶ ದಾಖಲಾಗಿದೆ. 86 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 32 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಎರಡು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ವಿವೇಕ್ 500 ರಲ್ಲಿ 491 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ, ನಿಖಿಲ್ ಬಿ ಗೌಡ 489 ಅಂಕ ಪಡೆದು ದ್ವಿತೀಯ ಹಾಗೂ ಯಶವಂತ ರಾಜ್ ಎಸ್ ಡಿ 485 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿರುತ್ತಾರೆ. ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರ, ಅಳಿಕೆಯ ಪ್ರಾಂಶುಪಾಲರಾದ ಶಿವಕುಮಾರ್ ಯಂ. ತಿಳಿಸಿರುತ್ತಾರೆ.