ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ
ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು ಅಳಿಕೆಯಲ್ಲಿ ದಿನಾಂಕ 3.9.2018ರ ಸೋಮವಾರದಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯನ್ನು ವಿಟ್ಲದ ಖ್ಯಾತ ವೈದ್ಯರಾದ ಡಾ. ಗೀತಾ ಪ್ರಕಾಶ್ ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಯು. ಗಂಗಾಧರ ಭಟ್ ಅಧ್ಯ,ಕ್ಷತೆ ವಹಿಸಿ ಚೆಸ್ ಸ್ಪರ್ಧೆಯು ವಿದ್ಯಾರ್ಥಿಗಳ ಮಾನಸಿಕ ಕ್ಷಮತೆಯನ್ನು ವೃದ್ಧಿಗೊಳಿಸುತ್ತದೆ ಎಂದರು. ವೇದಿಕೆಯಲ್ಲಿ ಸಂಚಾಲಕರಾದ ಕೆ.ಎಸ್. ಕೃಷ್ಣ ಭಟ್, ಪ್ರಾಂಶುಪಾಲರಾದ ಪ್ರಕಾಶ್ ವಿ. ದೈವಜ್ಞ, ಚೆಸ್ ಮಾಸ್ಟರ‍್ಸ್‌ಗಳಾದ ಪ್ರಸನ್ನ ಮತ್ತು ಡೆರಿಕ್ ಪಿಂಟೊ ಇವರು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿಯವರಾದ ಹಾಗೂ ದೈಹಿಕ ಶಿಕ್ಷಣದ ನಿರ್ದೇಶಕರಾದ ಚಂದ್ರಶೇಖರ ಭಟ್ ಯಸ್ ಇವರು ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕರಾದ ಅಶೋಕ ಭಟ್ ವಂದಿಸಿದರು ಹಾಗೂ ಕ್ರೀಡಾ ತರಬೇತುದಾರರಾದ ಶ್ರೀನಿವಾಸ ಕಾರ್ಯಕ್ರಮ ನಿರ್ವಹಿಸಿದರು.
ಫಲಿತಾಂಶ :
ಬಾಲಕರು :
ಶ್ರೀರಾಮ್, ವಿವೇಕಾನಂದ ಪಿಯು ಕಾಲೇಜು, ಪುತ್ತೂರು ಪ್ರಥಮ
ಅನೂಪ್ ಎಂ.ಜಿ., ಆಳ್ವಾಸ್ ಪಿಯು ಕಾಲೇಜು, ಮೂಡಬಿದ್ರೆ ದ್ವಿತೀಯ
ರಿಫಾಜ್ ಎಸ್.ಡಿ.ಎಂ. ಪಿಯು ಕಾಲೇಜು, ಉಜಿರೆ ತೃತೀಯ
ದರ್ಶನ್ ಬಿ.ಯಂ. ಆಳ್ವಾಸ್ ಪಿಯು ಕಾಲೇಜು, ಮೂಡಬಿದ್ರೆ ಚತುರ್ಥ ಮತ್ತು ಅಜಯ್ ಕೃಷ್ಣ ಡಿ, ಕೆನರಾ ಪಿಯು ಕಾಲೇಜು, ಪಂಚಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬಾಲಕಿಯರು :
ಶಾಲ್ಮಿಕ ಕೆ. ಜೈನ್, ಅಂಬಿಕಾ ಪಿಯು ಕಾಲೇಜು, ಪ್ರಥಮ
ಶ್ರೀದೇವಿ ಕೋಟೆ, ಅಂಬಿಕಾ ಪಿಯು ಕಾಲೇಜು, ದ್ವಿತೀಯ
ಸ್ವಾತಿ ಭಟ್ ಕೆ.ಎಂ., ಕೆನರಾ ಪಿಯು ಕಾಲೇಜು, ತೃತೀಯ
ಪಂಚಮಿ, ಸರ್ಪಂಗಳ ವಿವೇಕಾನಂದ ಪಿಯು ಕಾಲೇಜು, ಚತುರ್ಥ
ಪ್ರಶೀಕ್ಷ, ಎಸ್.ವಿ.ಎಸ್. ಪಿಯು ಕಾಲೇಜು ಪಂಚಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬಾಲಕರ ವಿಭಾಗದ ಚೆಸ್ ತಂಡ ಪ್ರಶಸ್ತಿಯನ್ನು ಆಳ್ವಾಸ್ ಪಿಯು ಕಾಲೇಜು ಪಡೆದಿರುತ್ತದೆ. ಬಾಲಕಿಯರ ವಿಭಾಗದ ತಂಡ ಪ್ರಶಸ್ತಿಯನ್ನು ಸೈಂಟ್ ಅಲೋಶಿಯಸ್ ಮಂಗಳೂರು ಪಡೆದಿರುತ್ತದೆ.