SRI SATHYA SAI LOKA SEVA TRUST, ALIKE

Alike Educational Institutions

+91 8255 239 236 , 238 736

ದೇಶ ಭಕ್ತಿ ಮತ್ತು ದೈವ ಭಕ್ತಿ ಬೆಳೆಸಿಕೊಳ್ಳಿ-ಪ್ರೊ. ಬಿ.ಎಸ್. ನಂಜುಂಡ ದೀಕ್ಷಿತ್

Prof Nanjunda Dixit BS revisedದೈವ ಭಕ್ತಿ ಮತ್ತು ದೇಶ ಭಕ್ತಿ ಬೆಳೆಸಿಕೊಂಡಾಗ ಬದುಕಿಗೊಂದು ಅರ್ಥ ಬರುತ್ತದೆ. ಗಣೇಶನ ಆರಾಧನೆಯಿಂದ ವಿದ್ಯೆ, ಬುದ್ಧಿ ಸಿದ್ಧಿಸುತ್ತದೆ. ಗಳಿಸಿದ ಸಿದ್ಧಿಯನ್ನು ದೇಶದ ಒಳಿತಿಗಾಗಿ ಬಳಸಿಕೊಳ್ಳಬೇಕು. ವಿದೇಶದಲ್ಲಿ ಹೋಗಿ ನೆಲಸಿ ಸಂಪತ್ತನ್ನು ಗಳಿಸಿ, ತಪ್ಪಲ್ಲ. ಆದರೆ ಆ ಸಂಪತ್ತು ನಮ್ಮ ಸಮಾಜಕ್ಕೆ ವಿನಿಯೋಗಬೇಕು ಎಂದು ಆಗಮಶಾಸ್ತ ಪಂಡಿತರಾದ ಪ್ರೊ. ಬಿ.ಎಸ್. ನಂಜುಂಡ ದೀಕ್ಷಿತರು ವಿದ್ಯಾರ್ಥಿಗಳಿಗೆ ಹೇಳಿದರು. ಅವರು ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳು ಏರ್ಪಡಿಸಿರುವ ವಿದ್ಯಾಗಣಪತಿ ಉತ್ಸವದ ಎರಡನೇ ದಿನದ ಪೂರ್ವಾಹ್ನ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಯೋಗೇಂದ್ರ ಎನ್. ದ್ವಿತೀಯ ಪಿಯುಸಿ ಮತ್ತು ರೋಹಿತ್ ೮ನೇ ವಿದ್ಯಾಕೇಂದ್ರ ವಿದ್ಯಾರ್ಥಿಗಳು ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್ ಸ್ವಾಗತಿಸಿ ರಾಜ್ಯಶಾಸ್ತ್ರ ಉಪನ್ಯಾಸಕ ಡಿ. ರಾಮಚಂದ್ರ ರಾವ್ ವಂದಿಸಿದರು. ಕನ್ನಡ ಉಪನ್ಯಾಸಕ ಶ್ರೀಧರ್ ಕೆ. ಕಾರ್ಯಕ್ರಮ ನಿರ್ವಹಿಸಿದರು.

ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.