ಐ.ಪಿ.ಎಸ್. ಸಾಧಕರಿಗೆ ಸನ್ಮಾನ ಸಭಾ ಕಾರ್ಯಕ್ರಮ
ಐ.ಪಿ.ಎಸ್. ಸಾಧಕರಿಗೆ ಸನ್ಮಾನ ಸಭಾ ಕಾರ್ಯಕ್ರಮ
ದಿನಾಂಕ : 14-12-2018 ಶುಕ್ರವಾರ ಸಮಯ : 4:30 ರಿಂದ
ಸಾಧನೆಗೆ ಶ್ರದ್ಧೆಯಿಂದ ಕೂಡಿದ ಪರಿಶ್ರಮವೇ ಪ್ರಮುಖವಾದದ್ದು. ಪ್ರತಿಯೊಬ್ಬನಲ್ಲೂ ಸಾಧಿಸುವ ಸಾಮರ್ಥ್ಯವಿದೆ. ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಕಲಿಕೆಗೆ ಸೂಕ್ತ ವಾತಾವರಣ, ಶಿಸ್ತು ಹಾಗೂ ಆತ್ಮ ಶಕ್ತಿಯನ್ನು ಉದ್ದೀಪಿಸಿ ಮಾನಸಿಕ ದೃಢತೆಯನ್ನು ಹೆಚ್ಚಿಸುವಲ್ಲಿ ಅಧ್ಯಾಪಕರ ಶ್ರಮ ಇರುವುದರಿಂದ ವಿದ್ಯಾರ್ಥಿಗಳು ಶ್ರೇಷ್ಠ ಮಟ್ಟದ ಸಾಧಕರಾಗುತ್ತಿದ್ದಾರೆ.
ಮನಸ್ಸಿನಲ್ಲಿ ಅಂದು ಕೊಂಡಿರುವುದನ್ನು ದೃಢ ಸಂಕಲ್ಪದೊಂದಿಗೆ ಕಾರ್ಯ ರೂಪಕ್ಕೆ ತರಲು ಮುನ್ನುಗ್ಗಬೇಕು. ಅದುವೇ ಪ್ರಾರ್ಥನೆ. ಆ ಪ್ರಾರ್ಥನೆ ಸಮಾಜಮುಖಿಯಾಗಿರಬೇಕು. ಪ್ರತಿಯೊಬ್ಬನಲ್ಲೂ ವೈಯಕ್ತಿಕ ಆಕಾಂಕ್ಷೆ ಇರಬೇಕು. ಅದು ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೆÇಲೀಸ್ ಅಧೀಕ್ಷರಾಗಿರುವ ಡಾ. ರವಿಕಾಂತೇ ಗೌಡರು ಐ.ಪಿ.ಎಸ್.ನಲ್ಲಿ 211ನೇ ರ್ಯಾಂಕ್ ವಿಜೇತ ಪೃಥ್ವಿಕ್ ಶಂಕರ್ ಇವರನ್ನು ಸನ್ಮಾನಿಸಿ ಮಾತನಾಡಿದರು.
ಈ ಅಭಿನಂದನಾ ಸಮಾರಂಭ ಸಾರ್ಥಕತೆ ಪಡೆಯಬೇಕಾದರೆ ವಿದ್ಯಾರ್ಥಿಗಳು ಪ್ರೇರಣೆಗೊಂಡು ಐ.ಎ.ಎಸ್., ಐ.ಪಿ.ಎಸ್. ಅಧಿಕಾರಿಗಳಾಗಿ ಮೂಡಿಬರಬೇಕು. ಸತ್ಯಸಾಯಿ ಸಂಸ್ಥೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಸಿಗುತ್ತಿರುವುದರಿಂದ ಇಲ್ಲಿನ ವಿದ್ಯಾರ್ಥಿಗಳು ಇಂತಹ ಸಾಧನೆ ಮಾಡಿದಾಗ ಬಲಿಷ್ಠ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ ಎಂದು ಅಳಿಕೆಯ ಹಳೆಯ ವಿದ್ಯಾರ್ಥಿ ಪೃಥ್ವಿಕ್ ಶಂಕರ್ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್, ಸಂಚಾಲಕ ಕೆ.ಯಸ್. ಕೃಷ್ಣ ಭಟ್, ಆಡಳಿತಾಧಿಕಾರಿ ಜನಾರ್ದನ ನಾಯಕ್ ಯಸ್. ಹಾಗೂ ಪೃಥ್ವಿಕ್ ಶಂಕರ್‍ನ ಪೆÇೀಷಕರು ಉಪಸ್ಥಿತರಿದ್ದರು. ಕಾರ್ಯದರ್ಶಿ ಯಸ್. ಚಂದ್ರಶೇಖರ ಭಟ್ ಸ್ವಾಗತಿಸಿ, ಮುಖ್ಯೋಪಾಧ್ಯಾಯರಾದ ರಘು ಟಿ.ವೈ. ವಂದಿಸಿದರು. ಯಾದವ ಯನ್. ನಿರೂಪಿಸಿದರು. ವಿದ್ಯಾರ್ಥಿಗಳಾದ ಪ್ರಣವ್ ಭಟ್ ಮತ್ತು ಧನುಷ್ ಬಿ.ಎ. ಹಾಡಿದರು. ಸಾಯಿ ಸಿಂಫೆÇನಿ ಬ್ಯಾಂಡ್‍ನ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.