SRI SATHYA SAI LOKA SEVA TRUST, ALIKE

Alike Educational Institutions

+91 8255 239 236 , 238 736

ಚೌತಿಯ ಗಣಪತಿ ವಿಸರ್ಜನಾ ಮೆರವಣಿಗೆ

Ganesh Festival Processionಚೌತಿಯ ಗಣಪತಿ ವಿಸರ್ಜನೆಯಲ್ಲೂ ಆದರ್ಶ ಮೆರೆದ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ನೂತನ ವೈಶಿಷ್ಟ್ಯಪೂರ್ಣ ರೀತಿಯದು. ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳ ಬ್ಯಾಂಡ್ ಮೇಳ, ಭಜನಾ ತಂಡ, ವೇದ ನಿನಾದದ ಶಿಸ್ತುಬದ್ದ ವಿಸರ್ಜನಾ ಮೆರವಣಿಗೆ.
ವಾಯುಮಾಲಿನ್ಯ, ಶಬ್ದಮಾಲಿನ್ಯಗಳನ್ನುಂಟುಮಾಡುವ ಪಟಾಕಿ, ಸುಡುಮದ್ದುಗಳ ಭರಾಟೆಗಳಿಲ್ಲ. ಈ ಧನದ ದುರ್ವ್ಯಯವಿಲ್ಲ. ಬದಲಾಗಿ ಊರ ಪರವೂರಿಂದ ಬಂದ ಪುಟಾಣಿಗಳಿಗೆಲ್ಲ ನೋಟ್‌ಬುಕ್, ಪೆನ್‌ಗಳ ರೂಪದಲ್ಲಿ ವಿದ್ಯಾಗಣಪತಿಯ ಪ್ರಸಾದ ವಿತರಣೆ ಮಾಡಲಾಯಿತು. ಸಾಧಾರಣ 350ಕ್ಕೂ ಮಿಕ್ಕಿ ಎಲ್ಲ ಮತ ಪಂಥಗಳ ಪುಟಾಣಿಗಳಿಗೆ ಈ ವಿಶಿಷ್ಟ ರೀತಿಯ ಪ್ರಸಾದ ವಿತರಿಸಿ ಸಂಸ್ಥೆಯ ವಿದ್ಯಾರ್ಥಿಗಳು ಮೇಲ್ಪಂಕ್ತಿ ಹಾಕಿದರು.