ಗಣೇಶೋತ್ಸವದ ಮೂರನೇ ದಿನದ ಕಾರ್ಯಕ್ರಮ
ದಿನಾಂಕ : 07-09-2016 ಬುಧವಾರ
ಸಮಯ : ಪೂರ್ವಾಹ್ನ 10:00 ರಿಂದ
ಸೇವೆ ತ್ಯಾಗಗಳಿಂದ ಜೀವನ ಸಾರ್ಥಕ್ಯ – ವಿನಯ ಬಿದರಿ
ಮೌಲ್ಯಯುತ ಶಿಕ್ಷಣದ ಕೊರತೆ ಇಂದಿನ ಮುಖ್ಯ ಸಮಸ್ಯೆಯಾಗಿದೆ. ಅಳಿಕೆಯಂತಹ ಶಿಕ್ಷಣ ಸಂಸ್ಥೆಗಳು ನಮಗಿಂದು ಬೇಕಾಗಿದೆ. ವಿದೇಶ ವ್ಯಾಮೋಹವನ್ನು ಬಿಟ್ಟು ದೇಶದ ಬಗ್ಗೆ ಚಿಂತನೆ ನಡೆಸಿ. ನೀವೂ ಬಾಳಿ ಉಳಿದವರನ್ನು ಬದುಕಲು ಬಿಡಿ. ಕಷ್ಟದಲ್ಲಿದ್ದವರನ್ನು ಕಂಡಾಗ ಕರಗುವ ಮನಸ್ಸಿರಲಿ. ಸೇವೆ ತ್ಯಾಗದ ಮೂಲಕ ಅವರ ಬಾಳಿನಲ್ಲೂ ಬೆಳಕು ಕಾಣುವಂತೆ ಮಾಡಿ. ನಾವು ಭಾರತೀಯರು ಎಂದು ಹೆಮ್ಮೆಯಿಂದ ಎದೆ ತಟ್ಟಿ ಹೇಳಿ. ಸರ್ವರಿಗೆ ಸಮ ಬಾಳು ಸರ್ವರಿಗೆ ಸಮಪಾಲು ನಮ್ಮ ಆಶಯವಾಗಲಿ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ವಿನಯ ಬಿದರಿ ನುಡಿದರು. ಅವರು ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನಡೆದ ಗಣೇಶೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಭೆಯ ಅಧ್ಯಕ್ಷತೆಯನ್ನು ಯು. ಗಂಗಾಧರ ಭಟ್ ವಹಿಸಿದ್ದರು. ಕೆ. ಸಂಜೀವ ಶೆಟ್ಟಿ, ಹೆಚ್. ರಮಾನಂದ ಉಪಸ್ಥಿತರಿದ್ದರು. ಕಾರ್ಯದರ್ಶಿ ಚಂದ್ರಶೇಖರ ಭಟ್ ವಂದಿಸಿದರು. ಉಪನ್ಯಾಸಕ ಯಾದವ ಎನ್. ಸ್ವಾಗತಿಸಿದರು. ವಿದ್ಯಾಕೇಂದ್ರದ ಅಧ್ಯಾಪಕ ರಾಧಾಕೃಷ್ಣ ಹೊಳ್ಳ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವೀರ ಸಾವರ್ಕರ್ ನಾಟಕ ಪ್ರದರ್ಶನ ನಡೆಯಿತು.