SRI SATHYA SAI LOKA SEVA TRUST, ALIKE

Alike Educational Institutions

+91 8255 239 236 , 238 736

ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ

 ಸ್ಥಳ:ಶ್ರೀ ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆ,ವಾಣಿವಿಹಾರ, ಅಳಿಕೆ
ದಿನಾಂಕ :
29.12.2018ರ ಶನಿವಾರ
                                                                                 

ಶ್ರೀ ಸತ್ಯಸಾಯಿ ಲೋಕಸೇವಾ ಹಿರಿಯ ಪ್ರಾಥಮಿಕ ಶಾಲೆ, ಅಳಿಕೆ ಇಲ್ಲಿ ದಿನಾಂಕ 29.12.2018ರಂದು ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ನಡೆಯಿತು. 2018-19ನೇ ಸಾಲಿನ ಪಾಠ, ಪಠ್ಯೇತರ, ಕ್ರೀಡೆ ಮತ್ತು ವಿಶೇಷ ಸಾಧನೆ ಮಾಡಿದ ಮಕ್ಕಳಿಗೆ ಬಹುಮಾನವಿತ್ತು ಪ್ರೋತ್ಸಾಹಿಸಲಾಯಿತು. ಸುಮಾರು 40 ವರ್ಷಗಳಷ್ಟು ಅಧ್ಯಾಪಕ ವೃತ್ತಿಯಲ್ಲಿ ತೊಡಗಿಸಿಕೊಂಡು 10 ವರ್ಷಗಳ ಕಾಲ ಈ ಶಾಲೆಯಲ್ಲಿ ಸೇವೆಗೈದ ಯಂ. ಗೋಪಾಲಕೃಷ್ಣ ಭಟ್ಟರನ್ನು ಸನ್ಮಾನಿಸಲಾಯಿತು. ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್, ಶಾಲಾಭಿವೃದ್ದಿ ಸಮಿತಿ, ಶಿಕ್ಷಕ ವೃಂದ ಮತ್ತು ಮಕ್ಕಳ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್‍ರವರು ಸನ್ಮಾನಿಸಿ ಶಿಕ್ಷಕರುಗೈದ ಸೇವೆಯನ್ನು ಕರ್ತವ್ಯವೆಂದು ಭಾವಿಸದೆ ಸೇವೆಗೈದ ಅವರ ಭವಿಷ್ಯ ಒಳ್ಳೆಯದಾಗಲಿ ಎಂದು ಹಾರೈಸಿದರು.

 

ಮುಖ್ಯ ಅತಿಥಿಗಳಾದ ಭಾರತ ಸೇವಾಶ್ರಮ ಕನ್ಯಾನ ಇದರ ಕಾರ್ಯದರ್ಶಿ ಯಸ್. ಈಶ್ವರ ಭಟ್‍ರವರು ಯಾವುದೇ ಪ್ರಶಸ್ತಿಗಿಂತಲೂ ಶಿಷ್ಯ ವೃಂದ ಗುರುಗಳ ಮೇಲೆ ಇಟ್ಟ ಪ್ರೀತಿಯೇ ಶ್ರೇಷ್ಟ ಪ್ರಶಸ್ತಿ ಎಂದು ಹೇಳಿ ಶುಭ ಹಾರೈಸಿದರು. ಸಭೆಯಲ್ಲಿ ಕಾನ ಈಶ್ವರ ಭಟ್ ಹಾಗೂ ವಿಟ್ಲ ವಲಯದ ಶಿಕ್ಷಣ ಸಂಯೋಜಕಿಯಾದ ಪುಷ್ಪಾರವರು ಸನ್ಮಾನಿತರಿಗೆ ಮತ್ತು ಮಕ್ಕಳಿಗೆ ಶುಭ ಹಾರೈಸಿದರು. ಶಿಕ್ಷಕರಾದ ವೇಣುಗೋಪಾಲ ಶೆಟ್ಟಿಯವರು ಸನ್ಮಾನಿತರ ಬಗ್ಗೆ ಅಭಿನಂದನಾ ಭಾಷಣ ಮಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಮತ್ತು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಯಸ್. ಜನಾರ್ದನ ನಾಯಕ್ ಸನ್ಮಾನ ಪತ್ರ ವಾಚಿಸಿದರು. ಸಂಚಾಲಕರಾದ ಕೆ.ಯಸ್. ಕೃಷ್ಣ ಭಟ್, ಕಾರ್ಯದಶಿಗಳಾದ ಯಸ್. ಚಂದ್ರಶೇಖರ ಭಟ್ ಉಪಸ್ಥಿತರಿದ್ದರು. ನಿವೃತ್ತ ಮುಖ್ಯ ಶಿಕ್ಷಕರಾದ ಯಂ. ರುಕ್ಮಯ್ಯ ಗೌಡ ಸ್ವಾಗತಿಸಿ, ಮುಖ್ಯ ಶಿಕ್ಷಕರಾದ ಈಶ್ವರ ನಾಯ್ಕ್ ಯಸ್. ರವರು ಶಾಲಾ ವರದಿ ವಾಚಿಸಿದರು ಹಾಗೂ ಧನ್ಯವಾದಗೈದರು. ದೈಹಿಕ ಶಿಕ್ಷಣ ಶಿಕ್ಷಕ ರಾಜೇಂದ್ರ ರೈ ನಿರೂಪಿಸಿದರು. ಮಧ್ಯಾಹ್ನ ಭೋಜನದ ಬಳಿಕ ಗೋಪಾಲಕೃಷ್ಣ ಭಟ್ ನಿರ್ದೇಶಿಸಿದ ಮಾಯಾವಿಇಂದ್ರಾರಿ ಎಂಬ ಯಕ್ಷಗಾನ ಮಕ್ಕಳಿಂದ ಪ್ರದರ್ಶಿಸಲ್ಪಟ್ಟಿತು.