SRI SATHYA SAI LOKA SEVA TRUST, ALIKE

Alike Educational Institutions

+91 8255 239 236 , 238 736

ವಿಟ್ಲ ಆರಕ್ಷಕ ಉಪನಿರೀಕ್ಷಕರಾದ ಪ್ರಕಾಶ್ ದೇವಾಡಿಗರವರಿಗೆ ಸನ್ಮಾನ

Prakasha Devadigaಸ್ಥಳ : ಸತ್ಯಸಾಯಿ ವಿಹಾರ, ಅಳಿಕೆ
ದಿನಾಂಕ : 12-12-2016 ಸೋಮವಾರ
ಸಮಯ : ಸಂಜೆ 6:೦೦

ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್‌ನ ವತಿಯಿಂದ ವಿಟ್ಲ ಆರಕ್ಷಕ ಠಾಣೆಯ ಉಪ ನಿರೀಕ್ಷಕರಾಗಿ ಸೇವೆ ಸಲ್ಲಿಸಿ, ಇದೀಗ ಕಡಬ ಠಾಣೆಗೆ ವರ್ಗಾವಣೆಗೊಂಡಿರುವ ಪ್ರಕಾಶ್ ದೇವಾಡಿಗ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಯು. ಗಂಗಾಧರ ಭಟ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು ಇದ್ದಲ್ಲಿ ಮಾತ್ರ ಜನರಿಗೆ ನೆಮ್ಮದಿಯಿಂದ ಜೀವಿಸಬಹುದು. ವಿಟ್ಲ ಠಾಣೆಯಲ್ಲಿ ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡಿ ಜನ ಮನ್ನಣೆ ಗಳಿಸಿದ ಪ್ರಕಾಶ್ ದೇವಾಡಿಗರವರು ಮುಂದೆ ಉತ್ತಮ ರೀತಿ ಸೇವೆ ಸಲ್ಲಿಸಿ, ಬಂಟ್ವಾಳ ವಿಭಾಗಕ್ಕೆ ಉನ್ನತ ಅಧಿಕಾರಿಯಾಗಿ ಬರಬೇಕು ಎಂದು ಆಶೀರ್ವದಿಸಿದರು.

ಸನ್ಮಾನ ಸ್ವೀಕರಿಸಿದ ದೇವಾಡಿಗರು ಮಾತನಾಡಿ, ತಮ್ಮ ಕರ್ತವ್ಯಕ್ಕೆ ಸಂಸ್ಥೆಯಿಂದ ನೀಡಿದ ಪ್ರೋತ್ಸಾಹ, ಸಹಕಾರವನ್ನು ಸ್ಮರಿಸಿಕೊಂಡರು. ಆರಕ್ಷಕರು ಎಲ್ಲರಿಗೂ ಬೇಕಾದವರು, ಆದರೆ ಆರಕ್ಷಕರ ಸೇವೆಯನ್ನು ಗುರುತಿಸುವ ಕಾರ್ಯವನ್ನು ಮಾಡುವವರು ಬಹಳ ವಿರಳ. ಇಂತಹ ಕಾರ್ಯವನ್ನು ಮಾಡಿದ ಸಂಸ್ಥೆಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಂಚಾಲಕರಾದ ಕೆ.ಎಸ್. ಕೃಷ್ಣ ಭಟ್ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ ಭಟ್ ಎಸ್. ಸ್ವಾಗತಿಸಿ, ವಂದಿಸಿದರು.